ಮಂಗಳವಾರ, ಸೆಪ್ಟೆಂಬರ್ 17, 2019
27 °C

ವಿಭಿನ್ನ ಸಂಸ್ಕೃತಿಯ ಅನಾವರಣ

Published:
Updated:
Prajavani

ವೈಟ್‌ಫೀಲ್ಡ್‌: ನಗರದ ವೈಟ್‌ಫೀಲ್ಡ್‌ನ ಶಾಂತಿನಿಕೇತನ ಅಪಾರ್ಟ್‌ಮೆಂಟ್‌ ಸಮುಚ್ಛಯದಲ್ಲಿ ಗಣೇಶೋತ್ಸವವನ್ನು ಸಡಗರದಿಂದ ಆಚರಿಸಲಾಯಿತು. 

ಸೂರ್ಯನ ರಥದ ಮಾದರಿಯಲ್ಲಿ ಕುಳಿತ ವಿಘ್ನ ವಿನಾಯಕನ ಮೆರವಣಿಗೆ ಮುಖ್ಯರಸ್ತೆಯಲ್ಲಿ ಬರುತ್ತಿದ್ದರೆ ಹತ್ತು ಸಾವಿರಕ್ಕೂ ಹೆಚ್ಚು ಮಂದಿ ಹಾಡು–ನೃತ್ಯದೊಂದಿಗೆ ಸ್ವಾಗತಿಸಿದರು. ಎಲ್ಲ ರಾಜ್ಯಗಳ ಜನರು ಇಲ್ಲಿ ವಾಸಿಸುತ್ತಿರುವುದರಿಂದ ವಿವಿಧ ಸಂಸ್ಕೃತಿಯ ನೃತ್ಯ
ರೂಪಕಗಳನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಯಿತು. 

ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಪಂಜಾಬ್, ಅಸ್ಸಾಂ, ಪಶ್ಚಿಮ ಬಂಗಾಳ, ರಾಜಸ್ಥಾನ ಮುಂತಾದ ರಾಜ್ಯಗಳ ನಿವಾಸಿಗಳು ಆಯಾ ರಾಜ್ಯಗಳ ಉಡುಗೆ ತೊಡುಗೆಗಳನ್ನು ತೊಟ್ಟು ಮೆರವಣಿಗೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿದ್ದು ವಿನಾಯ
ಕನ ಹಬ್ಬಕ್ಕೆ ಮತ್ತಷ್ಟು ಮೆರಗು ತಂದುಕೊಟ್ಟಿತ್ತು. ರಾಜ್ಯದ ಡೊಳ್ಳು ಕುಣಿತ, ಪೂಜಾ ಕುಣಿತ ಸೇರಿದಂತೆ ಪಂಜಾಬ್ ಮತ್ತು ಅಸ್ಸಾಂನ
ನೃತ್ಯ ಪ್ರದರ್ಶನ ಕಣ್ಮನ ಸೆಳೆಯಿತು.

Post Comments (+)