ಬುಧವಾರ, ನವೆಂಬರ್ 25, 2020
18 °C
‘ನನ್ನ ತಾಯಿಯ ಬಗ್ಗೆ ಪ್ರಸ್ತಾಪಿಸಬೇಡಿ’

ಕಣ್ಣೀರಿಟ್ಟ ಬಿಜೆಪಿ ಅಭ್ಯರ್ಥಿ ಮುನಿರತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ನಾನು ತಾಯಿಯನ್ನು ಮಾರಾಟ ಮಾಡಿದ್ದೇನೆ ಎಂದು ಕಾಂಗ್ರೆಸ್‌ ನಾಯಕರೊಬ್ಬರು  ಹೇಳಿದ್ದಾರೆ. ಬೇಕಿದ್ದರೆ ನನ್ನ ಬಗ್ಗೆ ಮಾತನಾಡಲಿ. 25 ವರ್ಷಗಳ ಹಿಂದೆ ನಿಧನರಾದ ತಾಯಿಯ ಬಗ್ಗೆ ಮಾತನಾಡಬೇಡಿ’ ಎಂದು ಆರ್‌.ಆರ್‌.ನಗರ ಬಿಜೆಪಿ ಅಭ್ಯರ್ಥಿ ಮುನಿರತ್ನ ಕಣ್ಣೀರು ಹಾಕಿದರು. 

‘ಕಾಂಗ್ರೆಸ್‌ ನಾಯಕರು ಇಂತಹ ಮಾತುಗಳನ್ನು ಆಡಿದ ಕಾರಣಕ್ಕೆ ಮಾತನ್ನು ವಾಪಸ್‌ ಪಡೆಯಿರಿ ಎಂದು ನಮ್ಮ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆಯೇ ಹೊರತು ಯಾರ ಮೇಲೂ ಹಲ್ಲೆ ಮಾಡಲು ಅಲ್ಲ’ ಎಂದು ಮುನಿರತ್ನ ಚುನಾವಣಾ ಪ್ರಚಾರದ ವೇಳೆ ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.