ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ; ಐವರ ಸೆರೆ

7

ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ; ಐವರ ಸೆರೆ

Published:
Updated:

ಬೆಂಗಳೂರು: ಸೈಯದ್ ಅಮೀನ್ (22) ಎಂಬುವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ ಐವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ವಾಲ್ಮೀಕಿ ನಗರದ ಮುದಾಸೀರ್ ಅಲಿಯಾಸ್ ಚೋಟಾ ಪಾಂಡ, ಸುಲ್ತಾನ್ ಪಾಷಾ, ಮಜರ್ ಖಾನ್, ನಯೀಮ್ ಪಾಷ ಹಾಗೂ ಮಹಮ್ಮದ್ ಮುಜಾಮಿಲ್ ಬಂಧಿತರು. ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. 

‘2017ರ ರಮ್ಜಾನ್ ಹಬ್ಬದ ವೇಳೆ ಅಮೀನ್ ಹಾಗೂ ಆತನ ಸ್ನೇಹಿತರು, ಹ್ಯಾರೋನ್ ಎಂಬುವರ ಮೇಲೆ ಹಲ್ಲೆ ನಡೆಸಿದ್ದರು. ಆ ಸಂಬಂಧ ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅದೇ ವೈಷಮ್ಯದಿಂದಾಗಿ ಹ್ಯಾರೋನ್ ಸ್ನೇಹಿತರಾದ ಆರೋಪಿಗಳು, ಬಂಬೂ ಬಜಾರ್ ರಸ್ತೆಯ ಆರ್.ಎ.ಎಸ್. ಸ್ಟೀಲ್ ಅಂಗಡಿ ಮುಂಭಾಗದಲ್ಲಿ ಜೂನ್ 31ರಂದು ರಾತ್ರಿ ಅಮೀನ್‌ ಅವರನ್ನು ಕೊಲೆ ಮಾಡಿದ್ದರು’ ಎಂದು ಪೊಲೀಸರು ಹೇಳಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !