ಕುಡಿದ ಮತ್ತಿನಲ್ಲಿ ಜಗಳ:ಹೊಸಹಳ್ಳಿ ಬಳಿ ಒಬ್ಬನ ಕೊಲೆ

ಗುರುವಾರ , ಜೂಲೈ 18, 2019
22 °C

ಕುಡಿದ ಮತ್ತಿನಲ್ಲಿ ಜಗಳ:ಹೊಸಹಳ್ಳಿ ಬಳಿ ಒಬ್ಬನ ಕೊಲೆ

Published:
Updated:

ಬೆಂಗಳೂರು: ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ಮಧ್ಯೆ ಆರಂಭಗೊಂಡ ಜಗಳ, ಒಬ್ಬನ ಕೊಲೆಯಲ್ಲಿ ಪರ್ಯಾವಸಾನ ಕಂಡಿದೆ.

ಚೌಡಪ್ಪ ಕಾಲೊನಿ ನಿವಾಸಿ ವಸಂತ್ ಅಲಿಯಾಸ್‌ ವಸಂತಕುಮಾರ್‌ ಕೊಲೆಯಾದ ವ್ಯಕ್ತಿ. ಆಟೊ ಚಾಲನೆ ಜೊತೆಗೆ ಪೇಂಟರ್‌ ವೃತ್ತಿ ಮಾಡುತ್ತಿದ್ದ ವಸಂತ್‌ ಮತ್ತು ನೆರೆಮನೆ ನಿವಾಸಿ ಕಮಲ್‌ ಸ್ನೇಹಿತರು. ರಾತ್ರಿ ಇಬ್ಬರೂ ಮದ್ಯ ಸೇವಿಸಿದ್ದು, ಹೊಸಹಳ್ಳಿ ಮುಖ್ಯರಸ್ತೆಯಲ್ಲಿ ಪಾದರಾಯನಪುರ ಚೌಡಪ್ಪ ಕಾಂಪೌಂಡ್‌ ಬಳಿ ಭಾನುವಾರ ರಾತ್ರಿ 12.30ರ ಸುಮಾರಿಗೆ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿಕೊಂಡಿದ್ದಾರೆ.

ಇಬ್ಬರ ಜಗಳ ವಿಕೋಪಕ್ಕೆ ತಿರುಗಿ ಕಮಲ್‌ ಚಾಕುವಿನಿಂದ ವಸಂತ್‌ ತೊಡೆಗೆ ಇರಿದಿದ್ದಾನೆ. ಗಂಭೀರವಾಗಿ ಗಾಯಗೊಂಡಿರುವ ವಸಂತ್‌ನನ್ನು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗಲಿಲ್ಲ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು, ಆರೋಪಿ ಕಮಲ್‌ನನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !