ಬುಧವಾರ, ನವೆಂಬರ್ 20, 2019
22 °C

ಸಿಗರೇಟ್ ವಿಚಾರಕ್ಕೆ ಜಗಳ | ಸ್ನೇಹಿತನ ಕೊಂದ ಐವರು ಸ್ನೇಹಿತರ ಬಂಧನ

Published:
Updated:

ಬೆಂಗಳೂರು: ಮಾಗಡಿ ರಸ್ತೆ ಠಾಣೆ ವ್ಯಾಪ್ತಿಯಲ್ಲಿ ಸಿಗರೇಟ್ ವಿಚಾರಕ್ಕಾಗಿ ನಡೆದ ಜಗಳದಲ್ಲಿ ಪ್ರವೀಣ್ (28) ಎಂಬುವರನ್ನು ಕೊಲೆ ಮಾಡಲಾಗಿದ್ದು, ಆ ಸಂಬಂಧ ಐವರು ಸ್ನೇಹಿತರನ್ನು ಬಂಧಿಸಿದ್ದಾರೆ.

ರಾಜಾಜಿನಗರದ ಅರವಿಂದ, ವಿನಯ್, ಡೆನ್ನಿಸ್, ಮಾಧವ್ ಹಾಗೂ ಪ್ರಕಾಶ್ ಬಂಧಿತರು.

‘ಬಿಸಿಎ ಪದವೀಧರರಾದ ಪ್ರವೀಣ್, ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಅವರು ಹಾಗೂ ಸ್ನೇಹಿತರು ಇದೇ 8ರಂದು ರಾತ್ರಿ ರಾಜಾಜಿನಗರದ ಕೈಗಾರಿಕಾ ಪ್ರದೇಶದ ಉದ್ಯಾನದಲ್ಲಿ ಸೇರಿದ್ದರು. ಸಿಗರೇಟ್ ಸೇದುವ ವಿಚಾರಕ್ಕಾಗಿ ಸ್ನೇಹಿತರ ನಡುವೆ ಗಲಾಟೆ ಶುರುವಾಗಿತ್ತು. ಆರೋಪಿಗಳು, ಪ್ರವೀಣ್ ತಲೆಗೆ ಹೊಡೆದು ಪರಾರಿಯಾಗಿದ್ದರು.’ ಎಂದು ಪೊಲೀಸರು ಹೇಳಿದರು. 

ಪ್ರತಿಕ್ರಿಯಿಸಿ (+)