ಗುರುವಾರ , ಏಪ್ರಿಲ್ 2, 2020
19 °C
ತಾಯಿ–ಮಗ ಸೇರಿ ಆರು ಮಂದಿ ಬಂಧನ

ಅಕ್ಕನಿಗೆ ಕಿರುಕುಳ ಕೊಟ್ಟಿದ್ದಕ್ಕೆ ರೌಡಿ ಹತ್ಯೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ತನ್ನ ಅಕ್ಕನಿಗೆ ಲೈಂಗಿಕ ಕಿರುಕುಳ ನೀಡಿ ತಾಯಿಯನ್ನು ಹಣಕ್ಕಾಗಿ ಪೀಡಿಸುತ್ತಿದ್ದ ಎಂಬ ಕಾರಣಕ್ಕೆ ಯುವಕನೊಬ್ಬ ಸಹಚರರ ಜೊತೆ ಸೇರಿ ರೌಡಿ ಪ್ರಭಾಕರ್‌ (28) ಎಂಬಾತನನ್ನು ಹತ್ಯೆ ಮಾಡಿದ್ದಾನೆ.

‘ಫೆ. 11ರಂದು ರಾತ್ರಿ 7.40ರ ವೇಳೆ ನಡೆದಿದ್ದ ಪ್ರಭಾಕರ್ ಕೊಲೆ ಸಂಬಂಧ ದೀಪಕ್‌ ಹಾಗೂ ಆತನ ತಾಯಿ ಮಾಲಾ, ಸಹಚರರಾದ ಶಿವ, ಅಜೇಯ್, ವಿನೋದ್, ಸುನೀಲ್ ಎಂಬುವರನ್ನು ಬಂಧಿಸಲಾಗಿದೆ. ಕೃತ್ಯಕ್ಕೆ ಬಳಸಿದ್ದ ಲಾಂಗ್ ಹಾಗೂ ಮಚ್ಚು ಜಪ್ತಿ ಮಾಡಲಾಗಿದೆ’ ಎಂದು ಕಾಟನ್‌ಪೇಟೆ ಪೊಲೀಸರು ಹೇಳಿದರು.

‘ಭಕ್ಷಿ ಗಾರ್ಡನ್ ನಿವಾಸಿ ದೀಪಕ್ (22), ಅಕ್ಕ ಹಾಗೂ ತಾಯಿ ಜೊತೆ ವಾಸವಿದ್ದ. ಕೊಲೆಗೆ ಯತ್ನ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನು ಮೇಲೆ ಹೊರಬಂದಿದ್ದ ರೌಡಿ ಪ್ರಭಾಕರ್, ದೀಪಕ್‌ನ ಅಕ್ಕನಿಗೆ ಕಿರುಕುಳ ನೀಡಲಾರಂಭಿಸಿದ್ದ. ತಾನೊಬ್ಬ ರೌಡಿ ಎಂದು ಹೇಳಿಕೊಂಡು ಓಡಾಡುತ್ತಿದ್ದ’

‘ದೀಪಕ್‌ನ ತಾಯಿ ಹೊಸ ಮನೆ ಕಟ್ಟಿಸುತ್ತಿದ್ದರು. ಮನೆ ಪೂರ್ಣಗೊಳಿಸಬೇಕಾದರೆ ತನಗೆ ₹40 ಸಾವಿರ ಕೊಡಬೇಕೆಂದು ಪ್ರಭಾಕರ್ ಪೀಡಿಸಲಾರಂಭಿಸಿದ್ದ. ಹಣ ಕೊಡದಿದ್ದರೆ ಎಲ್ಲರನ್ನೂ ಕೊಲೆ ಮಾಡುವುದಾಗಿ ಬೆದರಿಸಿದ್ದ. ಅದು ಗೊತ್ತಾಗುತ್ತಿದ್ದಂತೆ ಸಹಚರರ ಮೂಲಕ ದೀಪಕ್, ಪ್ರಭಾಕರ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದ. ಈ ಸಂಬಂಧ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ’ ಎಂದು ಪೊಲೀಸರು ಹೇಳಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು