ಬುಧವಾರ, ಜನವರಿ 20, 2021
21 °C

ಸ್ನೇಹಿತನನ್ನು ಕೊಂದಿದ್ದ ಆರೋಪಿ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನೀರಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ಕಬ್ಬನ್ ಪಾರ್ಕ್ ಪೊಲೀಸರು ಬಂಧಿಸಿದ್ದಾರೆ.

ಅಸ್ಸಾಂನ ಮಿಸ್ಬಾ ಹುಸೇನ್ ಲಷ್ಕರ್ (20) ಕೊಲೆಯಾದ ಯುವಕ. ಸ್ನೇಹಿತ ಆರೀಫುದ್ದಿನ್ ಆರೋಪಿ.

ಆರು ತಿಂಗಳ ಹಿಂದೆ ಅಸ್ಸಾಂನಿಂದ ಬಂದಿದ್ದ ಮಿಸ್ಬಾ, ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಆರೋಪಿ ಆರೀಫುದ್ದಿನ್ ಕೂಡ ಅದೇ ಕೆಲಸದಲ್ಲಿದ್ದ. ಇತ್ತೀಚೆಗೆ ನೀರಿನ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆಯಾಗಿತ್ತು.

ಇದರಿಂದ ಕೋಪಗೊಂಡಿದ್ದ ಆರೀಫುದ್ದಿನ್, ಮಿಸ್ಬಾನನ್ನು ಮನೆಗೆ ಕರೆಸಿಕೊಂಡು, ಉಸಿರುಗಟ್ಟಿ ಕೊಲೆ ಮಾಡಿದ್ದ. ಯಾರಿಗೂ ಅನುಮಾನ ಬರದಂತೆ ನೀರಿನ ಸಂಪ್‍ನಲ್ಲಿ ಶವ ಬಿಸಾಡಿದ್ದ. ಮಿಸ್ಬಾನ ಮೊಬೈಲ್ ಸ್ವಿಚ್ ಆಫ್ ಮಾಡಿ, ಅಸ್ಸಾಂಗೆ ಪರಾರಿಯಾಗಿದ್ದ.

ಮಿಸ್ಬಾ ಕಾಣೆಯಾಗಿದ್ದಾನೆ ಎಂದು ಸಹೋದರ ಕಬ್ಬನ್ ಪಾರ್ಕ್ ಠಾಣೆಗೆ ದೂರು ನೀಡಿದ್ದರು. ಮೊಬೈಲ್‌ನಿಂದ ಆರೋಪಿಯ ಸುಳಿವು ಸಿಕ್ಕಿದ್ದು, ಅಸ್ಸಾಂನಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಅಸ್ಸಾಂ ಪೊಲೀಸರ ಸಹಾಯದಿಂದ ಆರೋಪಿಯನ್ನು ಬಂಧಿಸಿದ್ಧಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು