ಕಾಣೆಯಾಗಿದ್ದ ಯುವಕನ ಶವ ಪತ್ತೆ

7

ಕಾಣೆಯಾಗಿದ್ದ ಯುವಕನ ಶವ ಪತ್ತೆ

Published:
Updated:
Deccan Herald

ಹೊಸಕೋಟೆ: ಕಾಣೆಯಾದ ಯುವಕನ ಶವ ತಾಲ್ಲೂಕಿನ ದೊಡ್ಡದೇನಹಳ್ಳಿ ಗ್ರಾಮದ ಬಳಿಯ ನೀಲಗಿರಿ ತೋಪಿನಲ್ಲಿ ಶನಿವಾರ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ನೆಲಮಂಗಲ ತಾಲ್ಲೂಕು ಸೋಂಪುರ ಹೋಬಳಿ ಅವರೆಹಳ್ಳಿಯ ಎಚ್.ಚೇತನ್ (23) ಮೃತಪಟ್ಟವರು.

ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಮುಖ ಮೈ ಮೇಲೆ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾರೆ.

ಚೇತನ್‌ ಅವರು ಹೆಬ್ಬಾಳ ಬಳಿಯ ಮಾನ್ಯತಾ ಟೆಕ್ ಪಾರ್ಕ್‌ನ ಇಂಟೆಲಿನೆಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮಹಾಲಕ್ಷ್ಮೀಪುರದಲ್ಲಿ ವಾಸವಾಗಿದ್ದರು. ಗುರುವಾರ ಚೇತನ್ ಬೈಕ್‌ನಲ್ಲಿ ತನ್ನ ಸ್ನೇಹಿತನನ್ನು ಕೃಷ್ಣರಾಜಪುರದಲ್ಲಿ ಬಿಟ್ಟು ಮನೆಗೆ ಹಿಂದಿರುಗಿದ್ದರು. ಶುಕ್ರವಾರ ಆತ ಕೆಲಸಕ್ಕೆ ಬಾರದಿದ್ದಾಗ ಆತನ ಸ್ನೇಹಿತ ವಿನಯ್ ಸಂಪರ್ಕಿಸಲು ಯತ್ನಿಸಿದ್ದರು. ಸಂಪರ್ಕಕ್ಕೆ ಸಿಗದಾಗ ಕೃಷ್ಣರಾಜಪುರ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ಬಗ್ಗೆ ದೂರು ನೀಡಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 3

  Sad
 • 0

  Frustrated
 • 0

  Angry

Comments:

0 comments

Write the first review for this !