ಚಾಕುವಿನಿಂದ ಇರಿದು ಕೊಲೆ; ಮೂವರ ಬಂಧನ

7

ಚಾಕುವಿನಿಂದ ಇರಿದು ಕೊಲೆ; ಮೂವರ ಬಂಧನ

Published:
Updated:

ಬೆಂಗಳೂರು: ಸುಂಕದಕಟ್ಟೆ ಸಮೀಪದ ಶ್ರೀನಿವಾಸನಗರದಲ್ಲಿ ನಡೆದಿದ್ದ ಅವಿನಾಶ್ ಗೌಡ (25) ಎಂಬುವರ ಕೊಲೆ ಪ್ರಕರಣ ಸಂಬಂಧ ಮೂವರನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.

ಕುಣಿಗಲ್ ತಾಲ್ಲೂಕಿನ ಎಸ್‌.ಕೆ.ರಾಜೇಶ್‌ ಹಾಗೂ ಆತನ ಸ್ನೇಹಿತರಾದ ಅಭಿಷೇಕ್, ಅರುಣ್ ಕುಮಾರ್ ಬಂಧಿತರು. ಇನ್ನೊಬ್ಬ ಆರೋಪಿ ಪುನೀತ್‌ ಎಂಬಾತ ತಲೆಮರೆಸಿಕೊಂಡಿದ್ದಾನೆ.

‘ಕೊಲೆಯಾದ ಅವಿನಾಶ್‌ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಮೃತನ ಸಂಬಂಧಿ ಸತೀಶ್‌ಗೆ ಆರೋಪಿಗಳ ಸ್ನೇಹವಿತ್ತು.  ಒಂದೇ ತಾಲ್ಲೂಕಿನವರಾದ ಅವರು ಕೆಲಸ ಹುಡುಕಿಕೊಂಡು ನಗರಕ್ಕೆ ಬಂದಿದ್ದರು. ಸುಂಕದಕಟ್ಟೆಯ ಶ್ರೀನಿವಾಸನಗರದ ಬಾಡಿಗೆ ಮನೆಯಲ್ಲಿ ವಾಸವಿದ್ದರು. ಮನೆಯಲ್ಲಿ ಆಗಸ್ಟ್‌ 12ರಂದು ನಡೆದ ಜಗಳದ ವೇಳೆ ಅವಿನಾಶ್‌ ಅವರನ್ನು ಕೊಲೆ ಮಾಡಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಆರೋಪಿ ರಾಜೇಶ್ ಜ್ಯೂಸ್‌ ಅಂಗಡಿ ನಡೆಸುತ್ತಿದ್ದ. ಸತೀಶ್ ಅದೇ ಅಂಗಡಿಯಲ್ಲಿ ಕೆಲಸಕ್ಕಿದ್ದ. ವ್ಯಾಪಾರ ಚೆನ್ನಾಗಿದ್ದರಿಂದಾಗಿ ಶ್ರೀನಿವಾಸ ನಗರದಲ್ಲೂ ರಾಜೇಶ್ ಹೊಸ ಜ್ಯೂಸ್‌ ಅಂಗಡಿ ತೆರೆದಿದ್ದ. ಅದನ್ನು ತಾವೊಬ್ಬರೇ ನಡೆಸುವುದಾಗಿ ಸತೀಶ್ ಹೇಳಿದ್ದ. ₹ 35 ಸಾವಿರ ಕೊಟ್ಟು ರಾಜೇಶ್ ಜತೆ ಒಪ್ಪಂದ ಮಾಡಿಕೊಂಡಿದ್ದ’ 

‘ಈ ವಿಷಯಕ್ಕೆ ಮನೆಯಲ್ಲಿ ಸತೀಶ್‌ ಹಾಗೂ ಆರೋಪಿಗಳ ಜತೆ ನಿತ್ಯವೂ ಜಗಳ ಶುರುವಾಗಿತ್ತು. ಅದೇ ಕಾರಣಕ್ಕೆ ಮನೆ ಬಿಟ್ಟು ಹೋಗಿದ್ದ ಸತೀಶ್, ‘ಜ್ಯೂಸ್‌ ಅಂಗಡಿ ಬೇಡ. ₹35 ಸಾವಿರ ವಾಪಸ್ ಕೊಡು’ ಎಂದು ರಾಜೇಶ್‌ಗೆ ಒತ್ತಾಯಿಸಿದ್ದ. ಮನೆಗೆ ವಾಪಸ್‌ ಬಂದರೆ ಹಣ ನೀಡುವುದಾಗಿ ಆರೋಪಿಗಳು ಹೇಳಿದ್ದರು. ಅವಿನಾಶ್‌ ಜೊತೆ ಸತೀಶ್ ಮನೆಗೆ ಹೋಗಿದ್ದರು. ಅದೇ ವೇಳೆ ಜಗಳ ತೆಗೆದಿದ್ದ ಆರೋಪಿಗಳು, ಅವಿನಾಶ್‌ ಹೊಟ್ಟೆಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಸತೀಶ್‌ ಮೇಲೂ ಹಲ್ಲೆ ಮಾಡಿ ಗಾಯಗೊಳಿಸಿದ್ದರು’ ಎಂದು ಪೊಲೀಸರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !