ಮ್ಯೂಚುವಲ್‌ ಫಂಡ್‌ಗೆ ₹10.50 ಕೋಟಿ ಅಕ್ರಮ ಹೂಡಿಕೆ

7

ಮ್ಯೂಚುವಲ್‌ ಫಂಡ್‌ಗೆ ₹10.50 ಕೋಟಿ ಅಕ್ರಮ ಹೂಡಿಕೆ

Published:
Updated:

ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಇಲಾಖೆ ಕಟ್ಟಡ ನಿರ್ಮಾಣ ಸೊಸೈಟಿ  ಕಾರ್ಯ ನಿರ್ವಾಹಕ ನಿರ್ದೇಶಕರು ಸಂಸ್ಥೆಗೆ ಸೇರಿದ ₹10.50 ಕೋಟಿಯನ್ನು ಅಕ್ರಮವಾಗಿ ಎಚ್‌ಡಿಎಫ್‌ಸಿ ಮ್ಯೂಚುವಲ್‌ ಫಂಡ್‌ನಲ್ಲಿ ಹೂಡಿಕೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.

ಇದರಿಂದ ಸಂಸ್ಥೆಗೆ ಬಡ್ಡಿ ರೂಪದಲ್ಲಿ ಬರಬೇಕಾಗಿದ್ದ ₹ 1.79 ಕೋಟಿ ನಷ್ಟವಾಗಿದೆ  ಎಂದು ಭಾರತೀಯ ಮಹಾಲೆಕ್ಕ ಪರಿಶೋಧಕರ ವರದಿ(ಸಿಎಜಿ) ತಿಳಿಸಿದೆ.

ಅಲ್ಲದೆ, ಸೊಸೈಟಿ ಮ್ಯೂಚುವಲ್‌ ಫಂಡ್‌ನಲ್ಲಿ ಬಿಡಿಎ ಹೂಡಿಕೆ ಮಾಡಿದ್ದ ಹೆಚ್ಚುವರಿ ₹2.13 ಕೋಟಿಯನ್ನು ಹೊಂದಾಣಿಕೆ ಮಾಡುವ ಮೂಲಕ ನಷ್ಟವನ್ನು ₹ 23 ಲಕ್ಷವನ್ನು ಲಾಭವೆಂದು ಮೋಸದಿಂದ ತೋರಿಸಿದ್ದಾರೆ.

ಸೊಸೈಟಿಯ ಆಡಳಿತ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕರಿಗೆ ಠೇವಣಿ ಅಥವಾ ಹೂಡಿಕೆ ಸೇರಿ ಯಾವುದೇ ರೀತಿಯಲ್ಲಿ ಹಣದ ವ್ಯವಹಾರ ನಡೆಸುವಂತಿಲ್ಲ.

ಆದರೆ, ನಿರ್ದೇಶಕರು ಆಡಳಿತ ಮಂಡಳಿ ಗಮನಕ್ಕೆ ತರದೇ ಮ್ಯೂಚುವಲ್‌ ಫಂಡ್‌ನಲ್ಲಿ ಹಣ ಹೂಡಿಕೆ ಮಾಡಿದ್ದರು ಎಂದು ವರದಿ ತಿಳಿಸಿದೆ.

ಕರ್ನಾಟಕ ಸ್ಟೇಟ್‌ ಬ್ಯೂರೋ ಆಫ್‌ ಪಬ್ಲಿಕ್‌  ಎಂಟರ್‌ಪ್ರೈಸಸ್‌ ಜಾರಿ ಮಾಡಿದ ಮಾರ್ಗದರ್ಶಿ ಸೂತ್ರಗಳ ಅನ್ವಯ ಸಾರ್ವಜನಿಕ ವಲಯ ಉದ್ಯಮಗಳು ಈಕ್ವಿಟಿ
ಆಧಾರಿತ ಕಾರ್ಯಾಚರಣೆ ಆಗುವ ಸಾರ್ವಜನಿಕ ಅಥವಾ ಖಾಸಗಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವಂತಿಲ್ಲ ಎಂದು ಹೇಳಿದೆ.

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !