ಬೆಂಗಳೂರು: ಮುಜರಾಯಿ ಕಾನೂನು ತಿದ್ದುಪಡಿ ಮಸೂದೆಗೆ ರಾಜ್ಪಪಾಲರು ಒಪ್ಪಿಗೆ ನೀಡುವ ಮೂಲಕ ‘ಸಿ’ ಶ್ರೇಣಿಯ ದೇವಸ್ಥಾನಗಳ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಅಖಿಲ ಕರ್ನಾಟಕ ಅರ್ಚಕರ ಆಗಮಿಕರ ಮತ್ತು ಉಪಾಧಿವಂತರ ಒಕ್ಕೂಟ ಮನವಿ ಮಾಡಿದೆ.

ಒಕ್ಕೂಟದ ಅಧ್ಯಕ್ಷ ಕೆ.ಇ. ರಾಧಾಕೃಷ್ಣ, ಪ್ರಧಾನ ಕಾರ್ಯದರ್ಶಿ ಕೆ.ಎಸ್.ಎನ್. ದೀಕ್ಷಿತ್ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಮುಜರಾಯಿ ಕಾನೂನಿಗೆ ತಿದ್ದುಪಡಿ ಮಾಡಿದರೆ ಹೆಚ್ಚು ವರಮಾನ ಇರುವ ‘ಎ’ ಮತ್ತು ‘ಬಿ’ ಶ್ರೇಣಿಯ ದೇವಸ್ಥಾನಗಳ ಹೆಚ್ಚುವರಿ ಆದಾಯದ ಪಾಲು ‘ಸಿ’ ಶ್ರೇಣಿಯ ದೇವಸ್ಥಾನಗಳಿಗೆ ಸಿಗಲಿದ್ದು, ಈ ದೇವಸ್ಥಾನಗಳ ಅಭಿವೃದ್ಧಿಗೆ ಸಹಾಯವಾಗುತ್ತದೆ. ಆದರೆ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಈ ಮಸೂದೆಯನ್ನು ಯಾಕೆ ವಾಪಸ್ ಕಳುಹಿಸಿದರು ಎಂಬುದು ಗೊತ್ತಾಗುತ್ತಿಲ್ಲ’ ಎಂದು ತಿಳಿಸಿದರು.

ರಾಜ್ಯ ಪುರಾತತ್ವ ಇಲಾಖೆ ಮತ್ತು ಮುಜರಾಯಿ ಇಲಾಖೆಗಳು ಜಂಟಿಯಾಗಿ ಕಾಲಮಿತಿ ನಿಗದಿಪಡಿಸಿಕೊಂಡು ಐತಿಹಾಸಿಕ ದೇವಸ್ಥಾನಗಳ ಆಸ್ತಿಗಳ ಸರ್ವೇಕ್ಷಣೆ ನಡೆಸಬೇಕು. ಅವುಗಳ ಅಭಿವೃದ್ಧಿಗೆ ₹500 ಕೋಟಿ ಮೀಸಲಿಡಬೇಕು. ಮುಜರಾಯಿ ದೇವಸ್ಥಾನಗಳಿಗೆ ಸಂಬಂಧಪಟ್ಟ ಸುಮಾರು ಒಂದು ಲಕ್ಷ ಎಕರೆ ವಿಸ್ತೀರ್ಣದ ಜಮೀನುಗಳನ್ನು ಪಟ್ಟಭದ್ರರು ಅತಿಕ್ರಮಣ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿಯೂ ದೇವಸ್ಥಾನಗಳ ಬೆಲೆ ಬಾಳುವ ಜಮೀನು ಬಲಿಷ್ಠರ ಕೈಯಲ್ಲಿದೆ. ಎ.ಟಿ. ರಾಮಸ್ವಾಮಿ ವರದಿಯನ್ನು ಅನುಷ್ಠಾನಕ್ಕೆ ತರುವ ಮೂಲಕ ಆ ಜಮೀನು ವಶಪಡಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಅರ್ಚಕರು, ಉದ್ಯೋಗಿಗಳ ಮೇಲೆ ನಡೆಯುವ ದೌರ್ಜನ್ಯ ತಡೆಯಲು ನೀತಿ ರೂಪಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿರುವ ದೇವಸ್ಥಾನಗಳಲ್ಲಿ ಅರ್ಚಕರಿಗೆ ವಸತಿ ನಿರ್ಮಿಸಿಕೊಡಬೇಕು. ದೇವಸ್ಥಾನಗಳ ಪಕ್ಕದಲ್ಲಿ ಸ್ನಾನಗೃಹ, ಶೌಚಾಲಯ ನಿರ್ಮಿಸಬೇಕು. ಆಗಮ, ಆಚರಣೆ, ಮತ್ತು ನಿರ್ವಹಣೆಗಾಗಿ ತರಬೇತಿ ನೀಡಬೇಕು. ಪೂಜಾದ್ರವ್ಯಗಳ ನಿರ್ವಹಣೆಗಾಗಿ ತಿಂಗಳಿಗೆ ₹5,000 ನೀಡಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಶಾಮಾಚಾರ್, ಶ್ಯಾಮಸುಂದರ್, ಉಮೇಶ್ ಶರ್ಮ, ಸಂಪರ್ಕಾಧಿಕಾರಿ ಗಾಯತ್ರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.