ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಭಾಷಿಕರ ‘ನಾನು ಕನ್ನಡಿಗ’ ಇಂದು

Last Updated 30 ಅಕ್ಟೋಬರ್ 2020, 19:06 IST
ಅಕ್ಷರ ಗಾತ್ರ

ಬೆಂಗಳೂರು: ‘ನಾನು ಕನ್ನಡಿಗ’, ‘ನಾನು ಕನ್ನಡತಿ’, ‘ಕನ್ನಡ ನಾಡು ಸುಂದರ’, ‘ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು..’

ಪರಭಾಷಿಕರು ಈ ರೀತಿ ಕನ್ನಡ ಪ್ರೇಮ ಮೆರೆಯುತ್ತಿದ್ದರೆ ಯಾವುದೇ ಕನ್ನಡಿಗನಿಗೆ ರೋಮಾಂಚನವಾಗುತ್ತದೆ. 65 ಪರಭಾಷಿಕರು ಕನ್ನಡದಲ್ಲಿ ನೀಡಿದ ಪ್ರದರ್ಶನವು ಇದೇ 31ರ ಸಂಜೆ 7.15ಕ್ಕೆ ಯೂಟ್ಯೂಬ್‌ನಲ್ಲಿ ಪ್ರಸಾರವಾಗಲಿದೆ. ಫರ್ನ್ಸ್‌ ದೊಡ್ಡನೆಕ್ಕುಂದಿ ಐಟಿ ಕಾರಿಡಾರ್‌ ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ.

ಮಕ್ಕಳು, ಯುವಕರು, ವೃದ್ಧರು ಎಂಬ ಯಾವುದೇ ಭೇದವಿಲ್ಲದೆ ಎಲ್ಲರೂ ಕನ್ನಡವನ್ನು ಶ್ರದ್ಧೆಯಿಂದ ಕಲಿತಿದ್ದಾರೆ. ಅದನ್ನು ಕನ್ನಡಿಗರೆದುರು ಹೆಮ್ಮೆಯಿಂದ, ಅಷ್ಟೇ ವಿಭಿನ್ನವಾಗಿ ಹೇಳಿಕೊಳ್ಳುವ ಉಮೇದಿನಲ್ಲಿ ಈ ಪರಭಾಷಿಕರಿದ್ದಾರೆ.

‘65 ಪರಭಾಷಿಕರು ಕನ್ನಡ ಕಲಿಯುವ ಪ್ರಯತ್ನ ಮಾಡಿದ್ದಾರೆ. ಅವರ ಪ್ರಯತ್ನ ಇತರೆ ಭಾಷಿಕರಿಗೂ ಪ್ರೇರಣೆಯಾಗಲಿದೆ. ಹಾಡು, ನೃತ್ಯ, ಸಂಗೀತದ ಮೂಲಕ ಇವರು ಕನ್ನಡಿಗರ ಮನ ಗೆಲ್ಲಲಿದ್ದಾರೆ. ಫರ್ನ್ಸ್‌ ರಾಜ್ಯೋತ್ಸವ ತಂಡದ ವತಿಯಿಂದ ಈ ಕಾರ್ಯಕ್ರಮ ನಡೆಯಲಿದೆ. ಕನ್ನಡಿಗರು ಇಂತಹ ಕಾರ್ಯಕ್ರಮ ಪ್ರೋತ್ಸಾಹಿಸಬೇಕು’ ಎಂದು ಸಂಘಟಕ, ಸಾಮಾಜಿಕ ಉದ್ಯಮಿ ವಿನಯ್‌ ಶಿಂಧೆ ಹೇಳಿದ್ದಾರೆ.

‘ಕನ್ನಡ ಮತ್ತು ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಬಿಂಬಿಸುವ ಕಾರ್ಯಕ್ರಮ ಇದಾಗಿದೆ’ ಎಂದೂ ಅವರು ತಿಳಿಸಿದ್ದಾರೆ.

ಕಾರ್ಯಕ್ರಮ ವೀಕ್ಷಣೆಗೆ, https://youtu.be/a-n6H8O-h4c ಈ ಲಿಂಕ್‌ ಬಳಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT