ಬೆಂಗಳೂರಿನ ಕಸದ ಸಮಸ್ಯೆ ಸದಾ ಸುದ್ದಿಯಲ್ಲಿರುತ್ತದೆ. ಪ್ರತಿ ವರ್ಷ ನೂರಾರು ಕೋಟಿ ಖರ್ಚು, ಯೋಜನೆಗಳ ಹೊರತಾಗಿಯೂ ಸಮಸ್ಯೆ ಮಾತ್ರ ಎದ್ದು ಕಾಣುತ್ತದೆ. ಸಾರ್ವಜನಿಕರಂತೂ ಹೈರಾಣಾಗಿದ್ದಾರೆ. ಈ ನಡುವೆ ನಗರದ ಕಸದ ಸಮಸ್ಯೆ ಕುರಿತಂತೆ ವರದಿ ಮಾಡಲು ಬೆಂಗಳೂರು ಮೂಲದ ಪ್ರಾಡಕ್ಟ್ ಡಿಸೈನರ್ ಜ್ಯೋತಿಶ್ ಎಂಬುವವರು 'NammaKasa’ ಎಂಬ ಆನ್ ಲೈನ್ ವೇದಿಕೆಯನ್ನು ಆರಂಭಿಸಿದ್ದಾರೆ.

ಇದರ ಮೂಲಕ ಬೆಂಗಳೂರಿನ ಜನರು ತಮ್ಮ ಪ್ರದೇಶದ ಕಸದ ಸಮಸ್ಯೆಯನ್ನು ಚಿತ್ರದ ಮೂಲಕ ಲೈವ್ ಮ್ಯಾಪ್ನಲ್ಲಿ 30 ಸೆಕೆಂಡುಗಳಲ್ಲಿ ಅಪ್ಡೇಟ್ ಮಾಡಬಹುದು. ಓಪನ್ ಸೋರ್ಸ್ ಟೂಲ್ ಬಳಸಿ ಈ ಜಾಲತಾಣವನ್ನು ರಚಿಸಲಾಗಿದ್ದು, ಯಾವುದೇ ಲಾಗಿನ್ ಅಗತ್ಯವಿರುವುದಿಲ್ಲ ಎಂದು ವರದಿ ತಿಳಿಸಿದೆ.

ಏಪ್ರಿಲ್ 8ರಂದೇ ಈ ಜಾಲತಾಣ ಶುರುವಾಗಿದ್ದು, 270ಕ್ಕೂ ಅಧಿಕ ದೂರು ವರದಿಯಾಗಿವೆ. ಅದರಲ್ಲಿ ಕೆಲವಕ್ಕೆ ಪರಿಹಾರ ಸಿಕ್ಕಿದೆ. 45,000ಕ್ಕೂ ಅಧಿಕ ಬಳಕೆದಾರರು ಭೇಟಿ ಕೊಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಬೆಂಗಳೂರು ನಗರದಲ್ಲಿನ ನಾಗರಿಕ ಸಮಸ್ಯೆಗಳು ಮತ್ತು ಕಸದ ಸಮಸ್ಯೆ ಬಗ್ಗೆ ನಾನೂ ಆಗಾಗ್ಗೆ ಮಾತನಾಡುತ್ತಿದ್ದೆ. ನಂತರ ಕೇವಲ ಹತಾಶೆಯನ್ನು ವ್ಯಕ್ತಪಡಿಸುವ ಬದಲು ಏನಾದರೂ ಮಾಡೋಣ ಎಂದು ಅರಿತುಕೊಂಡೆ. ದೈನಂದಿನ ನಾಗರಿಕ ಸಮಸ್ಯೆಗಳ ಪ್ರತಿಕ್ರಿಯೆಯಾಗಿ ಪ್ರಾರಂಭವಾದ ಈ ಜಾಲತಾಣ, ಕ್ರಮೇಣ ನಗರದಲ್ಲಿನ ಕಸದ ಸಮಸ್ಯೆಯನ್ನು ಪರಿಹರಿಸುವತ್ತ ಗಮನಹರಿಸುತ್ತಿದೆ ಎಂದು ಜ್ಯೋತಿಶ್ ವಿವರಿಸಿದ್ದಾರೆ.

ಸಾರ್ವಜನಿಕರಿಂದ ಇಷ್ಟು ದೊಡ್ಡ ಪ್ರಮಾಣದ ಪ್ರತಿಕ್ರಿಯೆಯನ್ನು ನಾನು ನಿರೀಕ್ಷಿಸಿರಲಿಲ್ಲ. ಜನರು ನಗರದ ಬಗ್ಗೆ ಹೊಂದಿರುವ ನೈಜ ಕಾಳಜಿಯನ್ನು ಇದು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

ಈ ವೇದಿಕೆಯ ಪ್ರಮುಖ ಕೆಲಸವೆಂದರೆ ಹೊಣೆಗಾರಿಕೆಯ ಮೇಲಿನ ಗಮನ. ವರದಿಯಾದ ಸಮಸ್ಯೆಗಳನ್ನು ಲೈವ್ ನಕ್ಷೆ ಮೂಲಕ ಸಾರ್ವಜನಿಕವಾಗಿ ಪ್ರದರ್ಶಿಸಲಾಗುತ್ತದೆ. ಸಂಸದರು ಮತ್ತು ಶಾಸಕರು ಸೇರಿದಂತೆ ಚುನಾಯಿತ ಪ್ರತಿನಿಧಿಗಳಿಗೆ ಲಿಂಕ್ ಮಾಡಲಾಗುತ್ತದೆ. ಸಮಸ್ಯೆಗಳು ಬಹಿರಂಗವಾಗಿ ಗೋಚರಿಸಿದಾಗ, ಕ್ರಮಕ್ಕಾಗಿ ಒತ್ತಾಯಿಸುವುದು ಸುಲಭವಾಗುತ್ತದೆ ಎಂದು ಜ್ಯೋತಿಶ್ ಹೇಳಿದ್ದಾರೆ.

ಭವಿಷ್ಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ತ್ಯಾಜ್ಯ ನಿರ್ವಹಣಾ ತಂಡಗಳಂತಹ ಸ್ಥಳೀಯ ಅಧಿಕಾರಿಗಳನ್ನು ಸಂಯೋಜಿಸುವ ಯೋಜನೆಗಳಿವೆ ಎಂದು ತಿಳಿಸಿದ್ದಾರೆ.

ಸಮಸ್ಯೆಗೆ ಸೂಕ್ತ ಪ್ರತಿಕ್ರಿಯೆ ಕಾರ್ಯವಿಧಾನಗಳನ್ನು ಸುಧಾರಿಸಲು ಡ್ಯಾಶ್ಬೋರ್ಡ್ ಅಭಿವೃದ್ಧಿಪಡಿಸುವ ಮತ್ತು ಅಧಿಕಾರಿಗಳೊಂದಿಗೆ ದತ್ತಾಂಶದ ಒಳನೋಟವನ್ನು ಹಂಚಿಕೊಳ್ಳುವ ಕೆಲಸ ನಡೆಯುತ್ತಿದೆ. ಸರ್ಕಾರವು ಸಮಸ್ಯೆಗಳನ್ನು ಉತ್ತಮವಾಗಿ ಗುರುತಿಸಲು ಮತ್ತು ಅರ್ಥಮಾಡಿಕೊಳ್ಳಲು ಒಂದು ಮಾಧ್ಯಮವಾಗಿ ಈ ವೇದಿಕೆ ಕಾರ್ಯನಿರ್ವಹಿಸುತ್ತದೆ ಎಂದು ಅವರು ಹೇಳಿದ್ದಾರೆ.

ವೇದಿಕೆಯು ಪ್ರಸ್ತುತ ಮುಖ್ಯವಾಗಿ ಕಸ ಸಂಬಂಧಿತ ಸಮಸ್ಯೆಗಳ ಮೇಲೆ ಕೇಂದ್ರೀಕರಿಸಿದೆ. ಭವಿಷ್ಯದಲ್ಲಿ ಇತರ ನಾಗರಿಕ ಸಮಸ್ಯೆಗಳತ್ತ ಗಮನ ಹರಿಸುವ ಚಿಂತನೆ ಇದೆ. ವಾಣಿಜ್ಯೇತರವಾಗಿ ಉಳಿದಿದ್ದು, ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವತ್ತ ಗಮನಹರಿಸುವುದನ್ನು ಮುಂದುವರಿಸುತ್ತದೆ ಎಂದು ಜ್ಯೋತಿಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.