ಬೆಂಗಳೂರು: ಕಲಾಕೃತಿಗಳಿಗೆ ನವದೆಹಲಿ ಮತ್ತು ಮುಂಬೈ ಮಾದರಿಯಲ್ಲಿ ಮಾರುಕಟ್ಟೆ ಕಲ್ಪಿಸುವ ಉದ್ದೇಶದಿಂದ ಕುಮಾರಕೃಪ ರಸ್ತೆಯಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತು ಇದೇ 6ರಿಂದ 10ರವರೆಗೆ ‘ನಮ್ಮ ಆರ್ಟ್–ಬೆಂಗಳೂರು’ ರಾಷ್ಟ್ರೀಯ ಕಲಾ ಮೇಳ ಹಮ್ಮಿಕೊಂಡಿದೆ.

ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪರಿಷತ್ತಿನ ಅಧ್ಯಕ್ಷ ಬಿ.ಎಲ್. ಶಂಕರ್, ‘ಕಳೆದ ವರ್ಷ ಈ ಮೇಳವನ್ನು ಪ್ರಾರಂಭಿಸಿದ್ದು, ಇದು ಎರಡನೇ ಆವೃತ್ತಿಯಾಗಿದೆ. ಇದು ಎಲ್ಲರನ್ನೂ ಒಳಗೊಳ್ಳುವ ಕಲಾ ಮೇಳವಾಗಿದ್ದು, ಸಾಂಪ್ರದಾಯಿಕ ಹಾಗೂ ಸಮಕಾಲೀನ ಕಲೆಗೆ ವಿಸ್ತೃತವಾದ ವೇದಿಕೆಯಾಗಿದೆ. ದೇಶದ ಪ್ರಖ್ಯಾತ 80 ಕಲಾವಿದರು ಸೇರಿದಂತೆ 150 ಕಲಾವಿದರ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ. ಇದಕ್ಕೆ ಪರಿಷತ್ತಿನ ಆವರಣದಲ್ಲಿ ನಿರ್ಮಾಣವಾಗಿರುವ 60 ‘ಚಿತ್ತಾರ’ ಮಳಿಗೆಗಳು ಹಾಗೂ ಗ್ಯಾಲರಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಈ ಪ್ರದರ್ಶನ ಮತ್ತು ಮಾರಾಟ ನಡೆಯಲಿದ್ದು, ಅಪರೂಪದ ಕಲಾಕೃತಿಗಳನ್ನು ನೇರವಾಗಿ ಕಲಾವಿದರಿಂದ ಖರೀದಿಸಬಹುದು’ ಎಂದರು.

‘ನವದೆಹಲಿ ಮತ್ತು ಮುಂಬೈನಲ್ಲಿ ಈ ರೀತಿಯ ಮೇಳ ನಡೆಯುತ್ತಿದ್ದು, ರಾಜ್ಯದ ಕಲಾವಿದರು ಕೂಡ ಪಾಲ್ಗೊಳ್ಳುತ್ತಿದ್ದರು. ಈಗ ಇಲ್ಲಿಯೇ ಅಂತಹ ಅವಕಾಶವನ್ನು ನಿರ್ಮಿಸಲಾಗುತ್ತಿದೆ. ನೋಂದಣಿ ಮಾಡಿಕೊಂಡ ವೃತ್ತಿಪರ ಕಲಾವಿದರು ಲಕ್ಷಾಂತರ ರೂಪಾಯಿ ಮೌಲ್ಯದ 1,500ಕ್ಕೂ ಅಧಿಕ ಕಲಾಕೃತಿಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಿದ್ದಾರೆ. ಮೇಳಕ್ಕೆ ಪ್ರವೇಶ ಉಚಿತ ಇರಲಿದೆ’ ಎಂದು ಹೇಳಿದರು.

ಕಲಾ ಕ್ಷೇತ್ರಕ್ಕೆ ಎಐ: ‘ಈ ಮೇಳದ ಜತೆಗೆ ಕಲಾ ಇತಿಹಾಸಕಾರ್ತಿ ಲೀನಾ ವಿನ್ಸೆಂಟ್ ಅವರು ಕ್ಯುರೇಟ್ ಮಾಡಿರುವ ಕಲಾ ಪ್ರದರ್ಶನವು ಪರಿಷತ್ತಿನ ನಾಲ್ಕು ಗ್ಯಾಲರಿಗಳಲ್ಲಿ ಇದೇ 6ರಿಂದ 20ರವರೆಗೆ ನಡೆಯಲಿದೆ. ಮಾಸ್ಟರ್ ಕ್ಲಾಸ್ ಮತ್ತು ಚರ್ಚಾ ಗೋಷ್ಠಿಗಳನ್ನು ಈ ಮೇಳ ಒಳಗೊಂಡಿದೆ. ಇದು ಪರಿಷತ್ತಿನ ಆವರಣದಲ್ಲಿರುವ ಗಾಂಧಿ ಕುಟೀರದಲ್ಲಿ ಇದೇ 7ರಿಂದ 9ರವರೆಗೆ ನಡೆಯಲಿದೆ’ ಎಂದು ಮಾಹಿತಿ ನೀಡಿದರು.

‘ಮಾಸ್ಟರ್ ಕ್ಲಾಸ್ ಮತ್ತು ಚರ್ಚಾಗೋಷ್ಠಿಯಲ್ಲಿ ಕಲಾ ಕ್ಷೇತ್ರದ ಪ್ರಮುಖರು ಪಾಲ್ಗೊಳ್ಳುತ್ತಾರೆ. ಇತ್ತೀಚೆಗೆ ಕಲಾ ಕ್ಷೇತ್ರಕ್ಕೂ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಕಾಲಿಟ್ಟಿದ್ದು, ಈ ಬಗ್ಗೆಯೂ ಚರ್ಚಾಗೋಷ್ಠಿ ನಡೆಯಲಿದೆ. ಇದರಲ್ಲಿ ಶಿಕ್ಷಣ ತಜ್ಞರು, ವಿನ್ಯಾಸಕರು, ಕಲಾವಿದರು ಮತ್ತು ಎಐ ತಂತ್ರಜ್ಞರು ಪಾಲ್ಗೊಳ್ಳುತ್ತಾರೆ. ಕಲಾ ಕ್ಷೇತ್ರದಲ್ಲಿನ ಅವಕಾಶಗಳು ಹಾಗೂ ಸವಾಲುಗಳ ಬಗ್ಗೆಯೂ ಚರ್ಚೆ ನಡೆಯಲಿದೆ’ ಎಂದು ವಿವರಿಸಿದರು.

ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್ ಎಸ್.ಎನ್., ಉಪಾಧ್ಯಕ್ಷ ಪ್ರಭಾಕರ್ ಟಿ. ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.