ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೆಟ್ರೊ: ಮತ್ತೊಂದು ಸುರಂಗ ಪೂರ್ಣ

Last Updated 9 ಸೆಪ್ಟೆಂಬರ್ 2022, 19:29 IST
ಅಕ್ಷರ ಗಾತ್ರ

ಬೆಂಗಳೂರು: ಮೆಟ್ರೊ ರೈಲು ಯೋಜನೆಯ ಮತ್ತೊಂದು ಸುರಂಗ ಮಾರ್ಗದ ಕಾಮಗಾರಿಯನ್ನು ಬಿಎಂಆರ್‌ಸಿಎಲ್ ಪೂರ್ಣಗೊಳಿಸಿದ್ದು,ವೆಲ್ಲಾರ ಜಂಕ್ಷನ್‌ನಿಂದ ಲ್ಯಾಂಗ್‌ಫೋರ್ಡ್‌ ಟೌನ್ ತನಕ ಸುರಂಗ ಕೊರೆದಿರುವ ‘ವರದಾ’ ಟಿಬಿಎಂ(ಟನಲ್ ಬೋರಿಂಗ್ ಮಷಿನ್) ಶುಕ್ರವಾರ ಹೊರಬಂದಿದೆ.

ಗೊಟ್ಟಿಗೆರೆ–ನಾಗವಾರ ಮೆಟ್ರೊ ರೈಲು ಮಾರ್ಗದಲ್ಲಿ ವೆಲ್ಲಾರ ಜಂಕ್ಷನ್‌(ರಾಷ್ಟ್ರೀಯ ಮಿಲಿಟರಿ ಸ್ಕೂಲ್‌)– ಲ್ಯಾಂಗ್‌ಫೋರ್ಡ್‌ ಟೌನ್‌ ನಡುವೆ 597 ಮೀಟರ್ ಸುರಂಗ ನಿರ್ಮಾಣದ ಕಾಮಗಾರಿಯನ್ನು 225 ದಿನಗಳಲ್ಲಿ ಪೂರ್ಣಗೊಳಿಸಿದೆ. ಶುಕ್ರವಾರ ಬೆಳಿಗ್ಗೆ 10.30ರ ಸುಮಾರಿನಲ್ಲಿ ಈ ಯಂತ್ರವು ಲ್ಯಾಂಗ್‌ಫೋರ್ಡ್ ಟೌನ್ ಬಳಿ ಹೊರಬಂದಿತು. ಈ ಸಂದರ್ಭದಲ್ಲಿ ಎಂಜಿನಿಯರ್‌ಗಳು, ಗುತ್ತಿಗೆದಾರರು, ಕಾರ್ಮಿಕರು ಹರ್ಷೋದ್ಗಾರದೊಂದಿಗೆ ಯಂತ್ರವನ್ನು ಸ್ವಾಗತಿಸಿದರು.

ಗೊ‌ಟ್ಟಿಗೆರೆ–ನಾಗವಾರ ಮಾರ್ಗದಲ್ಲಿ ಡೇರಿ ವೃತ್ತದಿಂದ ನಾಗವಾರ ತನಕ 21,255 ಮೀಟರ್‌ ಉದ್ದದ ಜೋಡಿ ಸುರಂಗ ಮಾರ್ಗ ನಿರ್ಮಾಣವಾಗುತ್ತಿದೆ. ಈ ಪೈಕಿ ಈವರೆಗೆ 12,838 ಮೀಟರ್ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT