ಬೆಂಗಳೂರು: ಟಿಕೆಟ್ಯೇತರ ಆದಾಯ ಹೆಚ್ಚಿಸಿಕೊಳ್ಳಲು ಮುಂದಾಗಿರುವ ‘ಬೆಂಗಳೂರು ಮೆಟ್ರೊ ರೈಲು ಕಾರ್ಪೊರೇಷನ್ ಲಿಮಿಟೆಡ್’ (ಬಿಎಂಆರ್ಸಿಎಲ್) ಆಯ್ದ ಪಿಲ್ಲರ್ಗಳು ಮತ್ತು ಪೋರ್ಟಲ್ಗಳಲ್ಲಿ ಜಾಹೀರಾತುಗಳನ್ನು ಪ್ರದರ್ಶಿಸಲು ಟೆಂಡರ್ ಆಹ್ವಾನಿಸಿದೆ.

ಮೆಟ್ರೊ ರೈಲು ಸಂಚರಿಸುತ್ತಿರುವ ನೇರಳೆ, ಹಸಿರು ಮತ್ತು ಹಳದಿ ಮಾರ್ಗಗಳಲ್ಲಿ ಮಾತ್ರವಲ್ಲದೆ, ಶೀಘ್ರದಲ್ಲಿಯೇ ಸಂಚಾರ ಆರಂಭಗೊಳ್ಳಲಿರುವ ಗುಲಾಬಿ ಮತ್ತು ನೀಲಿ ಮಾರ್ಗಗಳಲ್ಲಿ ಜಾಹೀರಾತು ಫಲಕಗಳ ವಿನ್ಯಾಸ, ಅಭಿವೃದ್ಧಿ, ಅಳವಡಿಕೆ ಮತ್ತು ನಿರ್ವಹಣೆಗಾಗಿ ಜಾಹೀರಾತು ಸಂಸ್ಥೆಗಳಿಂದ ಪ್ರಸ್ತಾವಗಳನ್ನು ಸಲ್ಲಿಸಲು ಕೋರಲಾಗಿದೆ.

‘ಜಾಹೀರಾತು ನಿಯಮಗಳನ್ನು ಅನುಸರಿಸಿಕೊಂಡು ಕಲಾತ್ಮಕವಾಗಿ ವಿನ್ಯಾಸಗೊಳಿಸಲಾಗುತ್ತದೆ. ಸ್ಥಿರ ಮತ್ತು ಡಿಜಿಟಲ್ ಜಾಹೀರಾತು ಫಲಕಗಳನ್ನು ಪರಿಚಯಿಸಲು ಯೋಜಿಸಲಾಗಿದೆ’ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಂಆರ್ಸಿಎಲ್ ಟಿಕೆಟ್ಯೇತರ ಮೂಲಗಳಿಂದ ಆದಾಯ ಗಳಿಸುವ ಯೋಜನೆಗೆ ಇದು ಪೂರಕವಾಗಿದೆ. ಮೆಟ್ರೊ ಕಾರಿಡಾರ್ಗಳ ಉದ್ದಕ್ಕೂ ಅವಕಾಶ ಇರುವ ಕಡೆಗಳಲ್ಲಿ ಜಾಹೀರಾತು ಪ್ರದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಆಕರ್ಷಕ ದೃಶ್ಯರೂಪದಲ್ಲಿಯೂ ಜಾಹೀರಾತುಗಳು ಪ್ರದರ್ಶನಗೊಳ್ಳಲಿವೆ. ಪಿಲ್ಲರ್ಗಳ ಮೇಲೆ ಬಹುತೇಕ ಜಾಹೀರಾತು ಫಲಕಗಳು 9X4 ಚದರ ಅಡಿ ಹಾಗೂ ಪೋರ್ಟಲ್ ಜಾಹೀರಾತುಗಳು 8X15 ಚದರ ಅಡಿ ಅಳತೆ ಇರಲಿವೆ. ಈ ಯೋಜನೆಗೆ ಬಿಎಂಆರ್ಸಿಎಲ್ ಜಿಎಸ್ಟಿ ಸೇರಿದಂತೆ ವಾರ್ಷಿಕವಾಗಿ ₹ 83.03 ಕೋಟಿ ಶುಲ್ಕವನ್ನು ನಿಗದಿಪಡಿಸಿದೆ.

7 ವರ್ಷ: ಒಪ್ಪಂದದ ಅವಧಿಯನ್ನು ಏಳು ವರ್ಷಗಳಿಗೆ ನಿಗದಿಪಡಿಸಲಾಗಿದೆ. ಪರಸ್ಪರ ಒಪ್ಪಂದದ ಆಧಾರದ ಮೇಲೆ ಇನ್ನೂ ಮೂರು ವರ್ಷಗಳವರೆಗೆ ವಿಸ್ತರಿಸಲು ಅವಕಾಶ ಇದೆ.

ಜಾಹೀರಾತು ಅಳವಡಿಸುವವರು ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಮತ್ತು ಸಂಬಂಧಿತ ಇಲಾಖೆಗಳಿಂದ ಅನುಮೋದನೆ ಪಡೆದಿರಬೇಕು. ವಿದ್ಯುತ್ ಮತ್ತು ಅಗ್ನಿ ಸುರಕ್ಷತೆ ಪಾಲನೆಯನ್ನು ಖಚಿತ ಪಡಿಸಿಕೊಳ್ಳಬೇಕು. ಜಾಹೀರಾತು ಅಳವಡಿಸಿದ ಬಳಿಕ ನಿರ್ವಹಣೆಯನ್ನೂ ಮಾಡಬೇಕು ಎನ್ನುವ ಷರತ್ತುಗಳನ್ನು ವಿಧಿಸಲಾಗಿದೆ ಎಂದು ಬಿಎಂಆರ್ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಆದಾಯ ಹೆಚ್ಚಳ: ಬಿಎಂಆರ್ಸಿಎಲ್ನ ಟಿಕೆಟ್ಯೇತರ ಆದಾಯವು 2024-25ರಲ್ಲಿ ₹54 ಕೋಟಿ ಇತ್ತು. 2025-26ರಲ್ಲಿ ₹145 ಕೋಟಿಗೆ ಏರಿಕೆಯಾಗಿದೆ. ಜಾಹೀರಾತು ಫಲಕ ಅಳವಡಿಕೆಯಾದರೆ ಈ ವರ್ಷ ಇನ್ನಷ್ಟು ವರಮಾನ ಹೆಚ್ಚಳ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.