ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲು ನೇರಳೆ ಮಾರ್ಗದಲ್ಲಿ ಮೆಟ್ರೊ ರೈಲು ಸಂಚಾರ ಆರಂಭ

ನಮ್ಮ ಮೆಟ್ರೊ: ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದ ಬಿಎಂಆರ್‌ಸಿಎಲ್
Last Updated 2 ಸೆಪ್ಟೆಂಬರ್ 2020, 21:24 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮೆಟ್ರೊ ರೈಲುಗಳ ಸಾರ್ವಜನಿಕ ಸೇವೆಯನ್ನು ಸೆ.7ರಿಂದ ಪುನರರಾಂಭಿಸಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್‌) ಸಕಲ ಸಿದ್ಧತೆ ಮಾಡಿಕೊಂಡಿದ್ದು, ವೇಳಾಪಟ್ಟಿ ಪ್ರಕಟಿಸಿದೆ.

ನೇರಳೆ ಮಾರ್ಗದಲ್ಲಿ ಮಾತ್ರ, ಅಂದರೆ ಬೈಯಪ್ಪನಹಳ್ಳಿ–ಮೈಸೂರು ರಸ್ತೆ ನಿಲ್ದಾಣದ ನಡುವೆ ಬೆಳಿಗ್ಗೆ ಮತ್ತು ಸಂಜೆ ವೇಳೆ ತಲಾ ಮೂರು ತಾಸು ಮಾತ್ರ ಸಂಚರಿಸಲಿವೆ. ಈ ಕುರಿತ ಕಾರ್ಯಾಚರಣೆ ಸುರಕ್ಷಾ ಮಾರ್ಗಸೂಚಿಯನ್ನು (ಎಸ್‌ಒಪಿ) ನಿಗಮವು ಗುರುವಾರ ಪ್ರಕಟಿಸಲಿದೆ.

ಸೆ.7ರಿಂದ ನೇರಳೆ ಮಾರ್ಗದಲ್ಲಿ ಬೆಳಿಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4.30ರಿಂದ 7.30ರವರೆಗೆ ರೈಲುಗಳು ಸಂಚರಿಸಲಿವೆ. ದಟ್ಟಣೆ ಅವಧಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ಕೈಗೊಳ್ಳಲಾಗಿದೆ.

ಹಸಿರು ಮಾರ್ಗದಲ್ಲಿ ಅಂದರೆ, ನಾಗಸಂದ್ರ ಮತ್ತು ಯಲಚೇನಹಳ್ಳಿಯಲ್ಲಿ ಸೆ.9ರಿಂದ ಸೇವೆ ಆರಂಭಿಸಲಾಗುತ್ತಿದ್ದು, ಮೇಲಿನ ವೇಳಾಪಟ್ಟಿಯಂತೆ ರೈಲುಗಳು ಸಂಚರಿಸಲಿವೆ. ಆದರೆ, ಸೆ.11ರಿಂದಬೆಳಿಗ್ಗೆ 7ರಿಂದ ರಾತ್ರಿ 9ರವರೆಗೆ ಸೇವೆ ಲಭ್ಯವಾಗಲಿದೆ.

ಹಿರಿಯ ನಾಗರಿಕರು ಮತ್ತು ಮಕ್ಕಳು ಪ್ರಯಾಣಿಸದಿರುವುದು ಉತ್ತಮ ಎಂದು ನಿಗಮದ ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT