ಭಾನುವಾರ, ನವೆಂಬರ್ 17, 2019
21 °C

ನಂದೀಶ್‌ ರೆಡ್ಡಿಗೆ ಬಿಎಂಟಿಸಿ ಅಧ್ಯಕ್ಷ ಸ್ಥಾನ

Published:
Updated:
Prajavani

ಬೆಂಗಳೂರು: ಬಿಜೆಪಿಯ ಮಾಜಿ ಶಾಸಕ ನಂದೀಶ್‌ ರೆಡ್ಡಿಯವರಿಗೆ ಬಿಎಂಟಿಸಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಈ ಹಿಂದೆ ಅವರಿಗೆ ಬಿಎಂಟಿಸಿ ಉಪಾಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿದಾಗ, ಅದನ್ನು ನಿರಾಕರಿಸಿದ್ದರು. ಕೆ.ಆರ್‌.ಪುರ ಕ್ಷೇತ್ರದ ಉಪ ಚುನಾವಣೆಯಲ್ಲಿ ಬೈರತಿ ಬಸವರಾಜ್‌ಗೆ ಟಿಕೆಟ್‌ ನೀಡುವುದನ್ನು ಅವರು ವಿರೋಧಿಸಿದ್ದರು. ನಂದೀಶ್‌ ಅವರನ್ನು ಸಮಾಧಾನಗೊಳಿಸಲು ಈಗ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿ, ಸಂಪುಟ ದರ್ಜೆಯನ್ನೂ ನೀಡಲಾಗಿದೆ.

ಉಪಚುನಾವಣೆ ನಡೆಯುವ ಎಂಟು ಕ್ಷೇತ್ರಗಳ ಪರಾಜಿತ ಅಭ್ಯರ್ಥಿಗಳಿಗೆ ವಿವಿಧ ನಿಗಮ– ಮಂಡಳಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳನ್ನು ನೀಡಲಾಗಿತ್ತು. ಅದರಲ್ಲಿ ವಿ.ಎಸ್‌.ಪಾಟೀಲ ಅವರನ್ನು ಹೊರತುಪಡಿಸಿ ಉಳಿದವರು ಅಧ್ಯಕ್ಷ ಸ್ಥಾನ ಸ್ವೀಕರಿಸಲು ನಿರಾಕರಿಸಿದ್ದರು. 

ಪ್ರತಿಕ್ರಿಯಿಸಿ (+)