ಮಂಗಳವಾರ, ನವೆಂಬರ್ 19, 2019
27 °C
ಉಪ ಚುನಾವಣೆ: ಬೈರತಿ ಹಾದಿ ಸುಗಮ

ಬಿಎಂಟಿಸಿ ಅಧ್ಯಕ್ಷ ಸ್ಥಾನ ಒಪ್ಪಿದ ನಂದೀಶ್‌ ರೆಡ್ಡಿ

Published:
Updated:
Prajavani

ಕೆ.ಆರ್.ಪುರ: ಬಿಎಂಟಿಸಿ ಅಧ್ಯಕ್ಷ ಸ್ಥಾನವನ್ನು ಬಿಜೆಪಿ ಮುಖಂಡ ಎನ್.ಎಸ್. ನಂದೀಶ್ ರೆಡ್ಡಿ ಕೊನೆಗೂ ಒಪ್ಪಿಕೊಂಡಿದ್ದಾರೆ. ಅಧ್ಯಕ್ಷರಾಗಿ ಗುರುವಾರ ಬೆಳಿಗ್ಗೆ 11.30ಕ್ಕೆ ಅಧಿಕಾರ ಸ್ವೀಕರಿಸಲಿದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ರೆಡ್ಡಿ ಅವರು ಕಾಂಗ್ರೆಸ್‌ನ ಬೈರತಿ ಬಸವರಾಜ್‌ ವಿರುದ್ಧ 30 ಸಾವಿರ ಮತಗಳ ಅಂತರದಿಂದ ಸೋತಿದ್ದರು. ಬೈರತಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಅನರ್ಹಗೊಂಡಿದ್ದಾರೆ.

‘ಯಾವುದೇ ಕಾರಣಕ್ಕೂ ಚುನಾವಣೆ ಕಣದಿಂದ ಹಿಂದೆ ಸರಿಯುವುದಿಲ್ಲ. ನಾನೇ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ’ ಎಂದು ರೆಡ್ಡಿ ಹೇಳಿದ್ದರು.

ಉಪಚುನಾವಣೆಯಲ್ಲಿ ಟಿಕೆಟ್‌ ನೀಡುವುದಾಗಿ ಬಿಜೆಪಿ ನಾಯಕರುಭರವಸೆ ನೀಡಿದ್ದರು. ನಂತರ ಅವರನ್ನು ಸಮಾಧಾನಪಡಿಸಲು ಬಿಎಂಟಿಸಿ ಉಪಾಧ್ಯಕ್ಷರಾಗಿ ನೇಮಿಸಿ ಆದೇಶ ಹೊರಡಿಸಿತ್ತು. ಇದನ್ನು ಅವರು ಒಪ್ಪಿರಲಿಲ್ಲ. ಆದ್ದರಿಂದ ಸಂಪುಟ ದರ್ಜೆ ಸ್ಥಾನಮಾನ ಹುದ್ದೆಯಾದ ಬಿಎಂಟಿಸಿ ಅಧ್ಯಕ್ಷ ರಾಗಿ ನೇಮಕಮಾಡಿ‌ ಕಳೆದತಿಂಗಳು ಆದೇಶ ಹೊರಡಿಸಲಾಗಿತ್ತು.

ಪ್ರತಿಕ್ರಿಯಿಸಿ (+)