ಭಾನುವಾರ, 15 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಸ್ಮಾರ್ಟ್ ಗ್ಲಾಸ್ ಟೆಕ್ನಾಲಜಿ’ಗೆ ‘ನ್ಯಾನೊ ಇನ್ನೋವೇಷನ್’ ಪ್ರಶಸ್ತಿ

Published : 5 ಆಗಸ್ಟ್ 2024, 15:42 IST
Last Updated : 5 ಆಗಸ್ಟ್ 2024, 15:42 IST
ಫಾಲೋ ಮಾಡಿ
Comments

ಬೆಂಗಳೂರು: ‘ಸ್ಮಾರ್ಟ್ ಗ್ಲಾಸ್ ಟೆಕ್ನಾಲಜಿ’ ಅಭಿವೃದ್ಧಿಪಡಿಸಿರುವ ಜೆಎನ್‌ಸಿಎಎಸ್‌ಆರ್- ಸಿಇಎನ್‌ಎಸ್-ಎಸ್‌ಜಿಆರ್‌ಐ ತಂಡಕ್ಕೆ ‘ಬೆಂಗಳೂರು ಇಂಡಿಯಾ ನ್ಯಾನೊ ಇನ್ನೋವೇಷನ್’ ಪ್ರಶಸ್ತಿ ಲಭಿಸಿದೆ.

‘ಬೆಂಗಳೂರು ನ್ಯಾನೊ 2024’ ಸಮ್ಮೇಳನದ ಸಮಾರೋಪದಲ್ಲಿ ತಂಡಕ್ಕೆ ಟ್ರೋಫಿ, ಪ್ರಮಾಣಪತ್ರ ಮತ್ತು ₹1 ಲಕ್ಷ ನಗದು ಬಹುಮಾನ ನೀಡಲಾಯಿತು.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಎಜುಕೇಶನ್ ಆ್ಯಂಡ್‌ ರಿಸರ್ಚ್‌ನ (ಐಐಎಸ್‌ಇಆರ್) ಸುಮಿತಾ ಮುಖರ್ಜಿ, ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಸೌಮಿ ಮೊಂಡಲ್, ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮನಿಶಾ ಬುಂಗ್ಲಾ ಮತ್ತು ಬೆಂಗಳೂರಿನ ಜೆಎನ್‌ಸಿಎಎಸ್‌ಆರ್‌ನ ಸೌರವ್ ರುದ್ರಾ ಅವರಿಗೆ ‘ಕರ್ನಾಟಕ ಡಿಎಸ್‌ಟಿ ನ್ಯಾನೋಸೈನ್ಸ್ ಫೆಲೋಶಿಪ್ ಪ್ರಶಸ್ತಿ’, ತಲಾ ₹50 ಸಾವಿರ ನಗದು, ಪ್ರಮಾಣಪತ್ರ ನೀಡಿ ಗೌರವಿಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.

ರಾಷ್ಟ್ರೀಯ ಮಟ್ಟದ ‘ನ್ಯಾನೊಟೆಕ್ ರಸಪ್ರಶ್ನೆ ಸ್ಪರ್ಧೆ’ಯಲ್ನಿ 22 ರಾಜ್ಯಗಳು ಮತ್ತು ಎರಡು  ಕೇಂದ್ರಾಡಳಿತ ಪ್ರದೇಶಗಳಿಂದ 437 ವಿದ್ಯಾರ್ಥಿಗಳು ಪ್ರಾದೇಶಿಕ ಸುತ್ತಿನಲ್ಲಿ ಪಾಲ್ಗೊಂಡಿದ್ದರು. ‘ಗ್ರ್ಯಾಂಡ್ ಫಿನಾಲೆ’ಯಲ್ನಿ ಪೂರ್ವ ವಲಯದ ಮೆಸ್ರಾದ ಬಿರ್ಲಾ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿದ್ಯಾರ್ಥಿ ಅನಿಮೇಶ್ ಅವರು ರಾಷ್ಟ್ರೀಯ ವಿಜೇತರಾದರು. ಅವರಿಗೆ ₹50 ಸಾವಿರ ನಗದು ನೀಡಲಾಯಿತು. ಮೊದಲ ರನ್ನರ್‌ ಅಪ್‌ಗೆ ₹40 ಸಾವಿರ, ಎರಡನೇ ರನ್ನರ್‌ ಅಪ್‌ಗೆ ₹30 ಸಾವಿರ ನಗದು ಬಹುಮಾನ ನೀಡಲಾಯಿತು.

‘ನ್ಯಾನೊ ಸ್ಪಾರ್ಕ್ಸ್ ಸ್ಟಾರ್ಟಪ್ ಪಿಚ್‌’ ಸ್ಪರ್ಧೆಯಲ್ಲಿ 18 ನವೋದ್ಯಮಗಳು ಪಾಲ್ಗೊಂಡಿದ್ದವು. ನೀರ್ ಶಕ್ತಿ ಸಿಸ್ಟಮ್ಸ್, ಪ್ರಧಾನ್ ಇನ್ನೋವೇಷನ್ ಲ್ಯಾಬ್ಸ್, ವಿಮಾನೊ, ಟ್ರಿನ್ಯಾನೋ ಟೆಕ್ನಾಲಾಜಿ ಮತ್ತು ಶಿಲ್ಪ್ಸ್ ಸೈನ್ಸಸ್ ಕಂಪನಿಗಳು ಫೈನಲ್‌ಗೆ ಅರ್ಹತೆ ಪಡೆದಿದ್ದವು. ವಿಮಾನೊ ಮತ್ತು ನೀರ್ ಶಕ್ತಿ ಸಿಸ್ಟಮ್ಸ್ ವಿಜೇತರಾಗಿ, ತಲಾ ₹50 ಸಾವಿರ ನಗದು ಬಹುಮಾನ ಗಳಿಸಿದವು.

ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಅವರು ಪ್ರಶಸ್ತಿಗಳನ್ನು ಪ್ರದಾನ ಮಾಡಿದರು. ‘ನಾವು ಕರ್ನಾಟಕದಾದ್ಯಂತ ವಿಜ್ಞಾನ ಕೇಂದ್ರಗಳಲ್ಲಿ ಹೂಡಿಕೆ ಮಾಡುತ್ತಿದ್ದೇವೆ. ವೈಜ್ಞಾನಿಕ ಕ್ಷೇತ್ರದಲ್ಲಿನ ಬೆಳವಣಿಗೆ, ಆಕರ್ಷಣೆಯತ್ತ ಬೆಂಗಳೂರು ನಗರ ದಾಪುಗಾಲು ಇಟ್ಟಿದೆ. ಇದಕ್ಕೆ ಪೂರಕವಾಗಿ ನಮ್ಮ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸುತ್ತಿದೆ’ ಎಂದು ಹೇಳಿದರು.

‘ಹವಾಮಾನ ಬದಲಾವಣೆ, ಆಹಾರ ಭದ್ರತೆ ಮತ್ತು ನೀರಿನ ಭದ್ರತೆಯಂತಹ ನಿರ್ಣಾಯಕ ಜಾಗತಿಕ ಸವಾಲುಗಳನ್ನು ಎದುರಿಸುವ ಗುರಿ ಹೊಂದಲಾಗಿದೆ. ಈ ಕ್ಷೇತ್ರದಲ್ಲಿ ತಂತ್ರಜ್ಞಾನಗಳ ಬಳಕೆ ಅಗತ್ಯ’ ಎಂದು ತಿಳಿಸಿದರು.

ನಾರಾಯಣ ಹೆಲ್ತ್ ಸಂಸ್ಥಾಪಕ ಡಾ. ದೇವಿಶೆಟ್ಟಿ ಮಾತನಾಡಿ, ‘ಪ್ರತಿ ಆಸ್ಪತ್ರೆಯೂ ಡಿಜಿಟಲ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ವೈದ್ಯಕೀಯ ದೋಷಗಳನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿಕೊಳ್ಳಬೇಕು. ರೋಗಿಗಳಿಗೆ ಸೂಕ್ತವಾದ ಚಿಕಿತ್ಸೆಗಳ ಮೂಲಕ ಆರೋಗ್ಯ ಸುಧಾರಿಸುವುದು ನಮ್ಮ ಪ್ರಮುಖ ಉದ್ದೇಶ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT