ಬಿಲ್ಲವರನ್ನು ಸ್ಪರ್ಶ್ಯರನ್ನಾಗಿಸಿದ ನಾರಾಯಣಗುರು: ಸೊರಕೆ

7
ಹುಳಿಮಾವು: 164ನೇ ಜಯಂತಿ ಸಮಾರಂಭ

ಬಿಲ್ಲವರನ್ನು ಸ್ಪರ್ಶ್ಯರನ್ನಾಗಿಸಿದ ನಾರಾಯಣಗುರು: ಸೊರಕೆ

Published:
Updated:
Deccan Herald

ಬೆಂಗಳೂರು: ಬಿಲ್ಲವರನ್ನು ಸ್ಪೃಶ್ಯ ಸಮಾಜದವರನ್ನಾಗಿಸಿ ಸಾಮಾಜಿಕ ಮಾನ್ಯತೆ ದೊರಕಿಸಿಕೊಟ್ಟ ಕೀರ್ತಿ ನಾರಾಯಣ ಗುರುಗಳಿಗೆ ಸಲ್ಲುತ್ತದೆ ಎಂದು ಕಾಂಗ್ರೆಸ್‌ ಮುಖಂಡ ವಿನಯ್‌ ಕುಮಾರ್‌ ಸೊರಕೆ ಹೇಳಿದರು. 

ಬನ್ನೇರುಘಟ್ಟ ರಸ್ತೆ ಹುಳಿಮಾವಿನಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬ್ರಹ್ಮಶ್ರೀ ನಾರಾಯಣ ಗುರು ಅವರ 164ನೇ ಜಯಂತಿ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕೇವಲ ಕರಾವಳಿಗೆ ಸೀಮಿತವಾಗಿದ್ದ ನಾರಾಯಣ ಗುರು ಜಯಂತಿ ಇಂದು ರಾಜ್ಯದಾದ್ಯಂತ ಆಚರಿಸಲಾಗುತ್ತಿದೆ. ಇದು ಹೆಮ್ಮೆಯ ಸಂಗತಿ. ದೇಶದಾದ್ಯಂತ ಚದುರಿ ಹೋಗಿರುವ ಸಮುದಾಯದ ವಿವಿಧ ಪಂಗಡಗಳನ್ನು ಒಟ್ಟುಗೂಡಿಸುವ ಕೆಲಸ ಆಗಬೇಕಿದೆ’ ಎಂದರು.

ಅರಕೆರೆ ವಾರ್ಡ್‌ನ ಪಾಲಿಕೆ ಸದಸ್ಯೆ ಭಾಗ್ಯಲಕ್ಷ್ಮಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಆರ್ಯ ಈಡಿಗರ ಸಂಘದ ಅಧ್ಯಕ್ಷ ಡಾ. ತಿಮ್ಮೇಗೌಡ, ಬಿಲ್ಲವ ಸಂಘದ ಅಧ್ಯಕ್ಷ ಎಂ.ವೇದಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ನಳಿನಾಕ್ಷಿ ಇದ್ದರು. ಬಿಲ್ಲವ ಭವನ ನಿರ್ಮಾಣಕ್ಕೆ ಸಹಾಯ ಮಾಡಿದವರನ್ನು ಸನ್ಮಾನಿಸಲಾಯಿತು. ದೇವಿಕಾ ಎಂಬ ವಿದ್ಯಾರ್ಥಿನಿ ಪ್ರತಿಭಾ ಪುರಸ್ಕಾರ ಪಡೆದರು. ಪುತ್ತೂರಿನ ಕಲಾವಿದರು ‘ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಯಕ್ಷಗಾನ ಪ್ರದರ್ಶನ ನೀಡಿದರು.

‘ಸೋತವ ಬಂದೆ, ಗೆದ್ದವ ಬರಲಿಲ್ಲ’

‘ರಾಜಕಾರಣದಲ್ಲಿ ನಾನು ಹಿಂದೆ ಬಿದ್ದಿದ್ದೇನೆ. ಅದಕ್ಕಾಗಿ ಸೋತೆ. ಆದರೆ ಸೋತವನು ಮೊದಲು ಬಂದಿದ್ದೇನೆ. ಗೆದ್ದವರು ಇನ್ನೂ ಬರುವುದರಲ್ಲಿಯೇ ಇದ್ದಾರೆ’ ಎಂದು ಸೊರಕೆ, ಕಾರ್ಯಕ್ರಮಕ್ಕೆ ಗೈರಾದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಅವರ ಹೆಸರು ಹೇಳದೆ ಕಾಲೆಳೆದರು. 

ಡಿಸಿಎಂಗೆ ಕಾದು ಸುಸ್ತಾದ ಸಂಘಟಕರು!

ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಅವರ ಆಗಮನಕ್ಕೆ ಒಂದೂವರೆ ಗಂಟೆ ಕಾಯಬೇಕಾಯಿತು. ಅಷ್ಟರಲ್ಲಿ ಸಭಾಂಗಣ ಸಭಿಕರಿಂದ ತುಂಬಿತ್ತು. ಡಿಸಿಎಂ ಸ್ವಾಗತಕ್ಕಾಗಿ ಬಿಸಿಲಿನಲ್ಲಿ ಕಾದಿದ್ದ ನಾದ ಸ್ವರ ನುಡಿಸುವವರು, ಸ್ವಾಗತ ತಂಡದವರು ಗೊಣಗುತ್ತಲೇ ಸಭಾಂಗಣದತ್ತ ನಡೆದರು. ಅಧ್ಯಕ್ಷತೆ ವಹಿಸಬೇಕಿದ್ದ ಶಾಸಕ ಸತೀಶ್ ರೆಡ್ಡಿ ಕೂಡ ಗೈರಾಗಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !