‘ಭಾರತದಲ್ಲಿ ದಾನಿಗಳ ಕೊರತೆ ಇದೆ’

7

‘ಭಾರತದಲ್ಲಿ ದಾನಿಗಳ ಕೊರತೆ ಇದೆ’

Published:
Updated:

ಬೆಂಗಳೂರು: ‘ಜಾಗೃತಿ ಇಲ್ಲದ ಕಾರಣ ಭಾರತದಲ್ಲಿ ದಾನಿಗಳ ಸಂಖ್ಯೆ ಕಡಿಮೆ ಇದೆ. 10 ಲಕ್ಷ ಜನರಿಗೆ ಕೇವಲ 0.5ರಷ್ಟು ದಾನಿಗಳು ಮಾತ್ರ ಇದ್ದಾರೆ’ ಎಂದು ಮೂತ್ರಪಿಂಡ ತಜ್ಞ ಡಾ.ಸಂಜಯ್‌ ರಾವ್‌ ಹೇಳಿದರು.

ನಾರಾಯಣ ಹೆಲ್ತ್‌ ಆಸ್ಪತ್ರೆ ವತಿಯಿಂದ ಅಂಗಾಂಗ ದಾನ ಮತ್ತು ಅಂಗಾಂಗ ಕಸಿ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಮ್ಮ ಆಸ್ಪತ್ರೆಯಿಂದ ಇದುವರೆಗೂ 1500ಕ್ಕೂ ಹೆಚ್ಚು ಅಂಗಾಂಗ ಕಸಿ ಮಾಡಲಾಗಿದೆ. ಜಾಗೃತಿಯ ಕೊರತೆಯಿಂದಾಗಿ ದಾನಿಗಳು ಸಿಗುತ್ತಿಲ್ಲ. ಜೀವನಶೈಲಿಯ ಬದಲಾವಣೆಯಿಂದ ಮೂತ್ರಪಿಂಡ ವೈಫಲ್ಯದ ಸಮಸ್ಯೆಗೆ ಒಳಗಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಶೇ 30ರಷ್ಟು ದಾನಿಗಳು ಇದ್ದಾರೆ. ಆದರೆ ಭಾರತ ಈ ವಿಷಯದಲ್ಲಿ ಸಾಕಷ್ಟು ಹಿಂದೆ ಉಳಿದಿದೆ’ ಎಂದು ಅವರು ಅಭಿಪ್ರಾಯಪಟ್ಟರು.

‘ನಿರ್ದಿಷ್ಟ ಆಕಾರಕ್ಕೆ ಅಂಗಾಂಗವನ್ನು ಕತ್ತರಿಸಿಕೊಳ್ಳಬೇಕಾದ ಕಾರಣ ಯಕೃತ್‌ ಕಸಿ ತುಂಬಾ ಸಂಕೀರ್ಣವಾದದ್ದು. ಕುಟುಂಬಸ್ಥರೇ ದಾನ ಮಾಡಿದರೆ ಒಳ್ಳೆಯದು. ಜೀವಂತವಾಗಿರುವವರು ದಾನ ಮಾಡಿದರೆ ಕೇವಲ 6ರಿಂದ 8 ವಾರಗಳಲ್ಲಿ ಈ ಅಂಗ ಮತ್ತೆ ಬೆಳೆಯುತ್ತದೆ. ನಾರಾಯಣ ಹೆಲ್ತ್‌ನಲ್ಲಿ 80 ಮಕ್ಕಳಿಗೆ ಹಾಗೂ 8 ವಯಸ್ಕರಿಗೆ ಈ ಕಸಿ ಮಾಡಲಾಗಿದೆ’ ಎಂದು ಅವರು ವಿವರಿಸಿದರು.

Tags: 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !