ಬೆಂಗಳೂರು: ರಕ್ತ ಸೇರಿ ವಿವಿಧ ರೋಗ ನಿರ್ಣಯ ಮಾದರಿಗಳನ್ನು ಡ್ರೋನ್ ನೆರವಿನಿಂದ ಆಸ್ಪತ್ರೆಯಿಂದ ಪ್ರಯೋಗಾಲಯಕ್ಕೆ ರವಾನಿಸುವ ಪ್ರಾಯೋಗಿಕ ಯೋಜನೆ ನಗರದಲ್ಲಿ ಯಶಸ್ವಿಯಾಗಿದೆ.

ನಾರಾಯಣ ಹೆಲ್ತ್ ಸಂಸ್ಥೆಯು ವೈಮಾನಿಕ ಲಾಜಿಸ್ಟಿಕ್ ಕಂಪನಿ ಏರ್ ಬಾಂಡ್ ಸಹಯೋಗದಲ್ಲಿ ‘ಮೆಡಿಕಲ್ ಲಾಜಿಸ್ಟಿಕ್’ ಯೋಜನೆ ರೂಪಿಸಿದೆ. 54 ದಿನಗಳ ಅವಧಿಯಲ್ಲಿ 700ಕ್ಕೂ ಹೆಚ್ಚು ಬಾರಿ ಡ್ರೋನ್ ಹಾರಾಟ ನಡೆಸಿದೆ. ಪ್ರತಿ ಹಾರಾಟದಲ್ಲಿ ತಲಾ 40 ರೋಗ ನಿರ್ಣಯ ಮಾದರಿಗಳನ್ನು, ಚಂದಾಪುರದಲ್ಲಿರುವ ನಾರಾಯಣ ಹೆಲ್ತ್ ಕ್ಲಿನಿಕ್ನಿಂದ ಎಲೆಕ್ಟ್ರಾನಿಕ್ ಸಿಟಿಯ ನಾರಾಯಣ ಹೆಲ್ತ್ ಸಿಟಿಯಲ್ಲಿರುವ ಕೇಂದ್ರ ಪ್ರಯೋಗಾಲಯಕ್ಕೆ ರವಾನಿಸಿದೆ. 4 ಕಿ.ಮೀ. ದೂರದ ವೈಮಾನಿಕ ಮಾರ್ಗವನ್ನು ಕೇವಲ 10 ನಿಮಿಷಗಳಲ್ಲಿ ಕ್ರಮಿಸುತ್ತಿದೆ.

ಈ ಬಗ್ಗೆ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಾರಾಯಣ ಹೆಲ್ತ್ನ ಸಂಸ್ಥಾಪಕ ಅಧ್ಯಕ್ಷ ಡಾ.ದೇವಿಪ್ರಸಾದ್ ಶೆಟ್ಟಿ, ‘ಡ್ರೋನ್ ಮೂಲಕ ರೋಗ ನಿರ್ಣಯ ಮಾದರಿಗಳನ್ನು ರವಾನಿಸುವ ಯೋಜನೆ ಪ್ರಾಯೋಗಿಕವಾಗಿ ಯಶಸ್ವಿಯಾಗಿದೆ. ಬೆಂಗಳೂರಿನ ಸಂಚಾರ ದಟ್ಟಣೆಯಲ್ಲಿ, ನಿಗದಿತ ಅವಧಿಗೆ ರಕ್ತ ಸೇರಿ ವಿವಿಧ ವೈದ್ಯಕೀಯ ಮಾದರಿಗಳನ್ನು ಒಂದೆಡೆಯಿಂದ ಇನ್ನೊಂದೆಡೆ ರವಾನಿಸುವುದು ಕಷ್ಟಸಾಧ್ಯ. ರಸ್ತೆ ಸಾರಿಗೆಗೆ ಹೋಲಿಸಿದರೆ, ನೂತನ ವ್ಯವಸ್ಥೆಯಡಿ ಅತ್ಯಂತ ವೇಗವಾಗಿ ತಲುಪಿಸಬಹುದು’ ಎಂದು ವಿವರಿಸಿದರು.

‘ಡ್ರೋನ್ ಸಾಗಾಟಕ್ಕೂ ಮೊದಲು, ಸಂಸ್ಥೆಯ ಚಂದಾಪುರ ಕ್ಲಿನಿಕ್ನಿಂದ ರೋಗ ನಿರ್ಣಯದ ಮಾದರಿಗಳನ್ನು ದಿನಕ್ಕೆ 3 ರಿಂದ 4 ಬಾರಿ ರಸ್ತೆಯ ಮೂಲಕ ಕೇಂದ್ರ ಪ್ರಯೋಗಾಲಯಕ್ಕೆ ಸಾಗಿಸಲಾಗುತ್ತಿತ್ತು. ಸಂಚಾರ ದಟ್ಟಣೆಯಿಂದ ಅವು ಪ್ರಯೋಗಾಲಯ ತಲುಪುವುದು ವಿಳಂಬವಾಗುತ್ತಿತ್ತು. ಈಗ ಬೇಡಿಕೆಗೆ ತಕ್ಕಂತೆ ಮತ್ತು ನಿಗದಿತ ವೇಳಾಪಟ್ಟಿಯಂತೆ ಡ್ರೋನ್ ದಿನಕ್ಕೆ 20 ಹಾರಾಟಗಳನ್ನು ನಡೆಸುತ್ತಿದೆ. ಇದರಿಂದ ಪ್ರಯೋಗಾಲಯಗಳು ಮಾದರಿಗಳನ್ನು ನಿರಂತರವಾಗಿ ಸ್ವೀಕರಿಸುತ್ತಿವೆ. ರೋಗಿಗಳಿಗೂ ಪರೀಕ್ಷಾ ವರದಿಗಳು ಅಲ್ಪಾವಧಿಗೆ ದೊರೆಯುತ್ತಿವೆ’ ಎಂದರು.

‘ಮುಂದಿನ ದಿನಗಳಲ್ಲಿ ಬನಶಂಕರಿಯಲ್ಲಿರುವ ಸಂಸ್ಥೆಯ ಹೊಸ ಆಸ್ಪತ್ರೆ ಮತ್ತು ಎಲೆಕ್ಟ್ರಾನಿಕ್ ಸಿಟಿಯಲ್ಲಿರುವ ಆಸ್ಪತ್ರೆಯನ್ನು ಸಂಪರ್ಕಿಸುವ ಹೊಸ ಡ್ರೋನ್ ಕಾರಿಡಾರ್ ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಸರ್ಕಾರದ ಅನುಮತಿ ನಿರೀಕ್ಷಿಸಲಾಗುತ್ತಿದೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.