ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘30ರಿಂದ ಕಿರು ನಾಟಕೋತ್ಸವ’

Last Updated 15 ಏಪ್ರಿಲ್ 2022, 16:27 IST
ಅಕ್ಷರ ಗಾತ್ರ

ಬೆಂಗಳೂರು: ಪ್ರವರ ಥಿಯೇಟರ್‌ ಹಾಗೂ ಅಶ್ವಘೋಷ ಥಿಯೇಟರ್‌ ಟ್ರಸ್ಟ್‌ ಸಹಯೋಗದ ಎರಡನೇ ಆವೃತ್ತಿಯ ಕಿರು ನಾಟಕೋತ್ಸವಕ್ಕೆ ಇದೇ 30ರಂದು ಚಾಲನೆ ಸಿಗಲಿದೆ.

ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ನಾಟಕೋತ್ಸವದ ನಿರ್ದೇಶಕ ಹನುರಾಮ ಸಂಜೀವ,‘ಏಪ್ರಿಲ್‌ 30 ಮತ್ತು ಮೇ 1ರಂದು ಪ್ರಾಥಮಿಕ ಹಂತದ ಸ್ಪರ್ಧೆಗಳು ನಡೆಯಲಿವೆ. ಮೇ 15ರಂದು ಕೊನೆಯ ಹಂತದ ಸ್ಪರ್ಧೆ ಆಯೋಜಿಸಲಾಗಿದೆ’ ಎಂದು ತಿಳಿಸಿದರು.

‘ಕೋವಿಡ್‌ನಿಂದಾಗಿ ರಂಗಭೂಮಿ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ. ಕಲಾವಿದರೂ ಸಂಕಷ್ಟಕ್ಕೆ ಸಿಲುಕಿದ್ದಾರೆ. ರಂಗಕರ್ಮಿಗಳನ್ನು ಒಂದೆಡೆ ಸೇರಿಸಲು ಹಾಗೂ ರಂಗಭೂಮಿ ಚಟುವಟಿಕೆಗಳಿಗೆ ಹೊಸ ಚೈತನ್ಯ ತುಂಬಲು ಕಿರು ನಾಟಕೋತ್ಸವ ಸಹಕಾರಿಯಾಗಲಿದೆ’ ಎಂದು ಮತ್ತೊಬ್ಬ ನಿರ್ದೇಶಕ ನಂದೀಶ ದೇವ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT