ಬೆಂಗಳೂರು: ಭಾರತೀಯ ಶೈಕ್ಷಣಿಕ ಉಪಕ್ರಮದಲ್ಲಿ ಒಂದಾದ ರಾಷ್ಟ್ರೀಯ ಸ್ಟೆಮ್ ಚಾಲೆಂಜ್‌ನ ವಿಜೇತರನ್ನು ನಗರದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಸ್ಪರ್ಧೆಯ ‘ಗ್ರ್ಯಾಂಡ್ ಫಿನಾಲೆ’ಯಲ್ಲಿ ಘೋಷಿಸಲಾಯಿತು.
ಪ್ರತಿಭೆ ಮತ್ತು ನಾವೀನ್ಯ ಪ್ರದರ್ಶಿಸುವ ಈ ಸ್ಪರ್ಧೆಯ ನಾಲ್ಕನೇ ಆವೃತ್ತಿಯಲ್ಲಿ 20 ರಾಜ್ಯಗಳ 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸ್ಟೆಮ್ ಕಲಿಕೆಯು ಶಾಲಾ ಮಕ್ಕಳಲ್ಲಿ ಶಿಕ್ಷಣವನ್ನು ಉತ್ತೇಜಿಸುವ ಕಾರ್ಯಕ್ರಮವಾಗಿದ್ದು, ಸಾಮಾಜಿಕ ಉದ್ಯಮ ಬ್ರಿಲಿಯೊ ಸಹಯೋಗದೊಂದಿಗೆ ಸ್ಪರ್ಧೆ ಆಯೋಜಿಸಲಾಗಿತ್ತು.
ವಿಜ್ಞಾನ ಮತ್ತು ಗಣಿತ ಮಾದರಿ ಸ್ಪರ್ಧೆಗಳು, ತಂತ್ರಜ್ಞಾನ ರಸಪ್ರಶ್ನೆಗಳು ಮತ್ತು ಎಂಜಿನಿಯರಿಂಗ್ ಟಿಂಕರಿಂಗ್ ಸೇರಿದಂತೆ ವರ್ಷಪೂರ್ತಿ (ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್, ಗಣಿತ) ಚಟುವಟಿಕೆ ಪೂರ್ಣ ಪ್ರಮಾಣದಲ್ಲಿ ಅನುಷ್ಟಾನಗೊಳಿಸಲಾಗಿದೆ. ಅಂತಿಮ ಹಂತದಲ್ಲಿ 12 ರಾಜ್ಯಗಳಿಂದ 60ಕ್ಕೂ ಹೆಚ್ಚು ವಿದ್ಯಾರ್ಥಿಗಳು ಮತ್ತು 25 ಶಿಕ್ಷಕರು ಪಾಲ್ಗೊಂಡಿದ್ದರು.
ಮಹಾರಾಷ್ಟ್ರ, ಜಾರ್ಖಂಡ್, ಕರ್ನಾಟಕ, ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಮಧ್ಯಪ್ರದೇಶ, ತೆಲಂಗಾಣ, ರಾಜಸ್ಥಾನ, ಒಡಿಶಾ, ಪಂಜಾಬ್ ಮತ್ತು ಗೋವಾದ ಅಗ್ರ 27 ತಂಡಗಳು ರಾಷ್ಟ್ರೀಯ ಫೈನಲ್‌ಗೆ ಪ್ರವೇಶ ಪಡೆದಿದ್ದವು. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಶಿಕ್ಷಣ ಸಚಿವ ಮಧು ಬಂಗಾರಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ಬಿ.ಬಿ. ಕಾವೇರಿ, ರಾಷ್ಟ್ರೀಯ ಶಿಕ್ಷಣ ಪ್ರತಿಷ್ಠಾನದ ಶಾಲೆಗಳ ಟ್ರಸ್ಟಿ-ಕಾರ್ಯದರ್ಶಿ ಐಶ್ವರ್ಯಾ ಡಿಕೆಎಸ್ ಹೆಗ್ಡೆ, ಜವಾಹರಲಾಲ್ ನೆಹರೂ ತಾರಾಲಯದ ನಿರ್ದೇಶಕ ಬಿ.ಆರ್. ಗುರುಪ್ರಸಾದ್, ಸ್ಟೆಮ್ ಕಲಿಕೆ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶುತೋಷ್ ಪಂಡಿತ್, ಬ್ರಿಲಿಯೋ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವ ಪೆರುಬೊಟ್ಲಾ, ಸಾಮಾಜಿಕ ನಾಯಕಿ ಕುಸುಮಾ ಎಚ್, ಬ್ರಿಲಿಯೊ ಸುಸ್ಥಿರತೆಯ ಜಾಗತಿಕ ಮುಖ್ಯಸ್ಥ ಅಭಿಷೇಕ್ ರಂಜನ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.