ರಸ್ತೆ ಕಾಮಗಾರಿಗೆ ಚಾಲನೆ

7

ರಸ್ತೆ ಕಾಮಗಾರಿಗೆ ಚಾಲನೆ

Published:
Updated:

ನೆಲಮಂಗಲ: ಹಸಿರುಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಕ್ಕಪ್ಪನಹಳ್ಳಿಯಲ್ಲಿ ನರೇಗಾ ಯೋಜನೆಯಡಿ ₹ 18 ಲಕ್ಷ ವೆಚ್ಚದ 1.5 ಕಿ.ಮೀ ರಸ್ತೆ ಕಾಮಗಾರಿಗೆ ಪಂಚಾಯಿತಿ ಅಧ್ಯಕ್ಷ ಡಿ.ನರಸಿಂಹಮೂರ್ತಿ ಚಾಲನೆ ನೀಡಿದರು.

ನೂತನ ರಸ್ತೆ ನಿರ್ಮಾಣಗೊಂಡಾಗ ಲಕ್ಕಪ್ಪನಹಳ್ಳಿಯಿಂದ ಬೈರನಾಯಕನಹಳ್ಳಿಗೆ ಈಗ ಇರುವ 6 ಕಿಲೋಮೀಟರ್‌ ದೂರ ಒಂದೂವರೆ ಕಿಲೋಮೀಟರ್‌ಗೆ ಇಳಿಯಲಿದೆ. ಈ ಎರಡೂ ಗ್ರಾಮಗಳಲ್ಲಿ ಒಟ್ಟು 150 ಜನ ನರೇಗಾ ಉದ್ಯೋಗ ಕಾರ್ಡ್‌ ಹೊಂದಿದ್ದಾರೆ. ಕಾಮಗಾರಿ ಗುಣಮಟ್ಟವಾಗಿ ಮುಗಿಸಲು ಸಹಕರಿಸಬೇಕು ಎಂದು ನರಸಿಂಹಮೂರ್ತಿ ಹೇಳಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !