ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಿಸಿಬಿ ಪೊಲೀಸರಿಗೆ ಹೊಸ ಜಾಕೆಟ್

Last Updated 11 ಏಪ್ರಿಲ್ 2022, 8:53 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ನಡೆಯುವ ಅಪರಾಧ ಭೇದಿಸುವ ನಗರದ ಸಿಸಿಬಿ‌ ಪೊಲೀಸರಿಗೆ ಪ್ರತ್ಯೇಕ ಜಾಕೆಟ್ ನೀಡಲಾಗಿದೆ. ಇದನ್ನು ಧರಿಸಿಯೇ ಸಿಸಿಬಿ ಸಿಬ್ಬಂದಿ ಇನ್ನು‌ ಮುಂದೆ ಕೆಲಸ ಮಾಡಲಿದ್ದಾರೆ.

ಕಮಿಷನರ್ ಕಮಲ್ ಪಂತ್ ಅವರು ಸಿಬ್ಬಂದಿಗಳಿಗೆ ಜಾಕೆಟ್‌ಗಳನ್ನು ಸೋಮವಾರ ವಿತರಿಸಿದರು.

ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಪೊಲೀಸರು ಈಗಾಗಲೇ ಪ್ರತ್ಯೇಕ ಜಾಕೆಟ್ ಧರಿಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅದೇ ಮಾದರಿಯಲ್ಲೇ ಬೆಂಗಳೂರು ಸಿಸಿಬಿ ಪೊಲೀಸರು ಜಾಕೆಟ್ ಬಳಸಲಿದ್ದಾರೆ.

'ಡ್ರಗ್ಸ್ ಹಾಗೂ ಅಕ್ರಮಗಳ ವಿರುದ್ಧ ಕಾರ್ಯಾಚರಣೆ ನಡೆಸುವಾಗ ಪೊಲೀಸರು, ಈ ಜಾಕೆಟ್ ಧರಿಸಲಿದ್ದಾರೆ. ಕಾರ್ಯಾಚರಣೆ ವೇಳೆ ಸಿಬ್ಬಂದಿಯನ್ನು ಗುರುತಿಸುವುದು ಸುಲಭವಾಗಲಿದೆ' ಎಂದು ಸಿಸಿಬಿ‌ ಜಂಟಿ ಕಮಿಷನರ್ ರಮಣ್ ಗುಪ್ತಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT