ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಗ್ರರಿಗೆ ಹಣ: ಪಾಕ್‌ಗೆ ಹಿನ್ನಡೆ

Last Updated 23 ಫೆಬ್ರುವರಿ 2018, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್‌ (ರಾಯಿಟರ್ಸ್‌): ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುವ ರಾಷ್ಟ್ರಗಳ ಪಟ್ಟಿಗೆ ಮತ್ತೆ ಪಾಕಿಸ್ತಾನವನ್ನು ಸೇರಿಸಲು ಜಾಗತಿಕ ಅಕ್ರಮ ಹಣ ವರ್ಗಾವಣೆ ಕಣ್ಗಾವಲು ಸಂಸ್ಥೆಯೊಂದು ನಿರ್ಧರಿಸಿದೆ.

ಇದರಿಂದ ಅಮೆರಿಕದೊಂದಿಗೆ ಪಾಕಿಸ್ತಾನ ಹೊಂದಿರುವ ಆರ್ಥಿಕ ಸಂಬಂಧಕ್ಕೆ ಧಕ್ಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಈ ಪಟ್ಟಿಗೆ ಪಾಕಿಸ್ತಾನವನ್ನು ಸೇರಿಸಲು ಹಣಕಾಸು ಕ್ರಿಯಾ ಕಾರ್ಯಪಡೆ (ಎಫ್‌ಎಟಿಎಫ್‌)ನ ಸದಸ್ಯ ರಾಷ್ಟ್ರಗಳೊಂದಿಗೆ ಅಮೆರಿಕ ಕಳೆದ ವಾರ ಲಾಬಿ ನಡೆಸಿತ್ತು.

ಮುಸ್ಲಿಂ ಉಗ್ರ ಸಂಘಟನೆಗಳೊಂದಿಗೆ ಹೊಂದಿರಬಹುದಾದ ಸಂಪರ್ಕವನ್ನು ತೊರೆಯಲು ಈ ಮೂಲಕ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ತಂತ್ರಗಾರಿಕೆಯನ್ನು ಅಮೆರಿಕ ಅನುಸರಿಸುತ್ತಿದೆ. ಈ ನಡೆಯಿಂದಾಗಿ ಈಗಾಗಲೇ ಅಮೆರಿಕದೊಂದಿಗೆ ಹಳಸಿರುವ ಪಾಕಿಸ್ತಾನದ ಸಂಬಂಧ, ಇನ್ನಷ್ಟು ಹದಗೆಡುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗಿದೆ.

ಗಡಿ ನಿಯಂತ್ರಣ ರೇಖೆಗೆ ರಕ್ಷಣಾ ಪರಿಣತರು (ಇಸ್ಲಾಮಾಬಾದ್ ವರದಿ): ವಿಶ್ವಸಂಸ್ಥೆಯ ನಾಲ್ಕು ಕಾಯಂ ಸದಸ್ಯ ರಾಷ್ಟ್ರ ಸೇರಿ ಒಟ್ಟು ಆರು ದೇಶದ  ರಕ್ಷಣಾ ಪರಿಣತರಿಗೆ ಗಡಿನಿಯಂತ್ರಣ ರೇಖೆ ಬೇಟಿಗೆ ಪಾಕ್‌ ಆಯೋಜಿಸಿತ್ತು.

‘ಅಮೆರಿಕ, ಇಂಗ್ಲೆಂಡ್, ಫ್ರಾನ್ಸ್‌, ಚೀನಾ, ಟರ್ಕಿ ಹಾಗೂ ಇಂಡೋನೇಷ್ಯಾದ ರಕ್ಷಣಾ ತಜ್ಞರು ರಾವಲ್‌ಕೋಟ್‌ ಗಡಿನಿಯಂತ್ರಣ ರೇಖೆ ವೀಕ್ಷಿಸಿದ್ದಾರೆ. ಗಡಿಯಲ್ಲಿ ಭಾರತೀಯ ಸೇನೆ ನಾಗರಿಕರ ಮೇಲೆ ನಡೆಸುತ್ತಿರುವ ದಾಳಿಯ ಬಗ್ಗೆ ಈ ವೇಳೆ ಅವರಿಗೆ ವಿವರಿಸಿದ್ದೇವೆ’ ಎಂದು ಪಾಕಿಸ್ತಾನ ಸೇನಾ ವಕ್ತಾರ ತಿಳಿಸಿದ್ದಾರೆ.

ರಕ್ಷಣಾ ಪರಿಣಿತರೂ ಕೂಡ ಸ್ಥಳೀಯ ನಾಗರಿಕರನ್ನು ಮಾತನಾಡಿಸಿ, ಭಾರತ ಸೇನೆಯಿಂದ ಆಗುತ್ತಿರುವ ದಾಳಿ ಮತ್ತು ತೊಂದರೆ ಬಗ್ಗೆ ಮಾಹಿತಿ ಸಂಗ್ರಹಿಸಿದ್ದಾರೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT