ಕೆಎಸ್‌ಸಿಎ ಸ್ಫೋಟ ಪ್ರಕರಣ ಮೂವರಿಗೆ ಏಳು ವರ್ಷ ಜೈಲು

7
ಎನ್‌ಐಎ ನ್ಯಾಯಾಲಯದ ಮುಂದೆ ತಪ್ಪೊ‍‍ಪ್ಪಿಗೆ

ಕೆಎಸ್‌ಸಿಎ ಸ್ಫೋಟ ಪ್ರಕರಣ ಮೂವರಿಗೆ ಏಳು ವರ್ಷ ಜೈಲು

Published:
Updated:

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲಿ ಮೂವರನ್ನು ಅಪರಾಧಿಗಳು ಎಂದು ಘೋಷಿಸಿರುವ ಎನ್‌ಐಎ ನ್ಯಾಯಾಲಯ, ಏಳು ವರ್ಷ ಜೈಲು ಶಿಕ್ಷೆ ವಿಧಿಸಿ ಸೋಮವಾರ ತೀರ್ಪು ನೀಡಿದೆ.

ಗೋಹರ್ ಅಜೀಜ್ ಖೊಮೆನಿ, ಕಮಲ ಹಸನ್ ಹಾಗೂ ಮೊಹಮದ್ ಕಪಿಲ್ ಅಖ್ತರ್‌ ನ್ಯಾಯಾಲಯದಿಂದ ಜೈಲು ಶಿಕ್ಷೆಗೆ ಗುರಿಯಾದವರು. ಮೂವರೂ ಒಂದು ವರ್ಷ ಕಠಿಣ ಶಿಕ್ಷೆ ಅನುಭವಿಸಬೇಕಿದೆ. ಇದು ಏಳು ವರ್ಷದೊಳಗೇ ಸೇರಿರುತ್ತದೆ.  

ಅಜೀಜ್ ಖೊಮೆನಿ ಮತ್ತು ಕಮಲ ಹಸಸ್‌ಗೆ ತಲಾ ₹ 7.5 ಲಕ್ಷ ದಂಡ ಹಾಗೂ ಕಪಿಲ್ ಅಖ್ತರ್‌ಗೆ ₹10 ಲಕ್ಷ ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲರಾದರೆ ಹೆಚ್ಚುವರಿಯಾಗಿ ಒಂದು ವರ್ಷ ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಧೀಶ ಸಿದ್ಧಲಿಂಗಪ್ರಭು ತೀರ್ಪಿನಲ್ಲಿ ಹೇಳಿದ್ದಾರೆ.

ಅಪರಾಧಿಗಳು ಪಾವತಿಸಿದ ದಂಡವನ್ನು ಸ್ಫೋಟದಲ್ಲಿ ಗಾಯಗೊಂಡವರಿಗೆ ನೀಡುವಂತೆಯೂ ನ್ಯಾಯಾಧೀಶರು ಸೂಚಿಸಿದ್ದಾರೆ.

ಮೂವರೂ, ನ್ಯಾಯಾಧೀಶರ ಮುಂದೆ ಕಳೆದ ವಾರ ತಪ್ಪೊಪ್ಪಿಕೊಂಡಿದ್ದರಿಂದ ಶಿಕ್ಷೆ ಪ್ರಮಾಣ ಪ್ರಕಟಿಸಲಾಯಿತು. ‘ಸ್ಫೋಟ ಪ್ರಕರಣದಲ್ಲಿ ತಾವು ನೇರವಾಗಿ ಭಾಗಿಯಾಗಿಲ್ಲ. ಸ್ಫೋಟದ ಸಂಚು ರೂಪಿಸುವ ಸಭೆಗಳಲ್ಲಿ ಮಾತ್ರ ಭಾಗವಹಿಸಿದ್ದೆವು’ ಎಂದಿದ್ದರು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿ ಯಾಸಿನ್‌ ಭಟ್ಕಳ್‌ ಸೇರಿದಂತೆ 13 ಮಂದಿ ಆರೋಪಿಗಳಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !