ಕೆಂಗೇರಿ: ‘ಶಾಸಕ ಎಸ್.ಟಿ.ಸೋಮಶೇಖರ್ ತಮ್ಮ ಹಿಂಬಾಲಕರ ಹಿತಾಸಕ್ತಿಗಾಗಿ ನೈಸ್ ವಿಚಾರ ಪ್ರಸ್ತಾಪಿಸಿದ್ದಾರೆ. ರೈತರ ಲಾಭಕ್ಕಾಗಿ ಅಲ್ಲ’ ಎಂದು ಕೆಆರ್ಐಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಆರೋಪಿಸಿದರು.

‘ಟೋಲ್ ಮೂಲಕ ನೈಸ್ ಸಂಸ್ಥೆಯು ಸಾರ್ವಜನಿಕರಿಂದ ಅಕ್ರಮವಾಗಿ ಹಣ ಸಂಗ್ರಹ ಮಾಡುತ್ತಿದೆ. ಸರ್ಕಾರ ಈ ರಸ್ತೆಯನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಬೇಕು’ ಎಂದು ಶಾಸಕ ಎಸ್.ಟಿ. ಸೋಮಶೇಖರ್ ಸದನದಲ್ಲಿ ಆಗ್ರಹಿಸಿದ್ದರು.

ಈ ಬಗ್ಗೆ ಬುಧವಾರ ಸುದ್ದಿಗೋಷ್ಠಿಯಲ್ಲಿ ರುದ್ರೇಶ್ ಪ್ರತಿಕ್ರಿಯಿಸಿ, ‘ಭೂ ಪರಿಹಾರ ಸದನ ಸಮಿತಿ ಸಭೆಗಳಿಗೆ ನಿಯಮಿತವಾಗಿ ಹಾಜರಾಗಿ ಅಗತ್ಯ ಮಾಹಿತಿ ನೀಡಿದ್ದರೆ ವರ್ಷಗಳ ಹಿಂದೆಯೇ ಸಮಸ್ಯೆ ಬಗೆಹರಿಯುತ್ತಿತ್ತು. ಅವರಿಗೆ ಸ್ಥಳೀಯ ರೈತರ ಸಮಸ್ಯೆ ಬಗ್ಗೆ ಅರಿವಿಲ್ಲ’ ಎಂದು ಟೀಕಿಸಿದರು.

‘ರೈತರ ಸಮಸ್ಯೆ ಬಗ್ಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಲು ಸಿದ್ದಗಂಗಾ ಶ್ರೀಗಳ ಮೂಲಕ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ಎರಡು ತಿಂಗಳು ಕಳೆದರೂ ಫಲಪ್ರದವಾಗಿಲ್ಲ. ಉಪಮುಖ್ಯಮಂತ್ರಿ ಸೇರಿದಂತೆ ಸಂಬಂಧಿಸಿದ ಯಾವುದೇ ಸಚಿವರು ಸ್ಪಂದಿಸುತ್ತಿಲ್ಲ’ ಎಂದು ದೂರಿದರು.

ರೈತರ ಹಿತಾಸಕ್ತಿಗಾಗಿ ಯಡಿಯೂರಪ್ಪ, ದೇವೇಗೌಡರು ಮತ್ತೆ ಪ್ರತಿಭಟನೆಗೆ ಬರಬೇಕು ಎಂದು ಆಗ್ರಹಿಸಿದರು. ಸಮಸ್ಯೆ ಬಗೆ ಹರಿಯದಿದ್ದಲ್ಲಿ ಮುಂದಿನ ತಿಂಗಳು ನೈಸ್ ಟೋಲ್ ರಸ್ತೆಯಲ್ಲಿ ಪ್ರತಿಭಟನೆ ನಡೆಸಲಾಗುವುದು, ಪರಿಹಾರ ದೊರಕದ ರೈತರ ಭೂಮಿಗೆ ಕಾಂಪೌಂಡ್ ಹಾಕಲಾಗುವುದು ಎಂದು ಎಚ್ಚರಿಸಿದರು.

ಯಾರನ್ನು ನಂಬಬೇಕು?

ಟೋಲ್ ಮೂಲಕ ನೈಸ್ ಸಂಸ್ಥೆ ಪ್ರತಿ ದಿನ ₹ 2.5 ಕೋಟಿ ಆದಾಯ ಗಳಿಸುತ್ತಿದೆ ಎಂದು ಮಾಜಿ ಪ್ರಧಾನಿ ದೇವೇಗೌಡರು ತಿಳಿಸಿದ್ದರು. ₹ 10 ಕೋಟಿ ಆದಾಯ ಗಳಿಸುತ್ತಿದೆ ಎಂದು ಶಾಸಕರು ಸುಳಿವು ನೀಡಿದ್ದಾರೆ. ರೈತರು ಶಾಸಕರ ಮಾತನ್ನು ನಂಬಬೇಕೋ, ಮಾಜಿ ಪ್ರಧಾನಿಯನ್ನು ನಂಬಬೇಕೋ ತಿಳಿಯದಾಗಿದೆ ಎಂದು ಎಂ. ರುದ್ರೇಶ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.