ಬುಧವಾರ, ನವೆಂಬರ್ 20, 2019
22 °C

‘ನಿಶ್ಯಬ್ದ ವಲಯ: ಅಂತಿಮ ಅಧಿಸೂಚನೆ ಹೊರಡಿಸಿ’

Published:
Updated:

ಬೆಂಗಳೂರು: ರಾಜ್ಯದಲ್ಲಿ ನಿಶ್ಯಬ್ದ ವಲಯಗಳನ್ನು ಗುರುತಿಸಿ ಹೊರಡಿಸಿರುವ ಕರಡು ಅಧಿಸೂಚನೆಗೆ ಬರುವ ಆಕ್ಷೇಪಣೆಗಳನ್ನು ಪರಿಗಣಿಸಿ ಎರಡು ತಿಂಗಳಲ್ಲಿ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಹೈಕೋರ್ಟ್, ರಾಜ್ಯ ಸರ್ಕಾರಕ್ಕೆ ಗುರುವಾರ ಸೂಚನೆ ನೀಡಿದೆ.

ರಾಜ್ಯದ ಎಲ್ಲ ನಗರ ಅಥವಾ ಪಟ್ಟಣಗಳಿಗೆ ಶಬ್ದಮಾಲಿನ್ಯ ಅಳೆಯುವ ಮೀಟರ್‌ ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದೂ ಹೈಕೋರ್ಟ್‌ ಆದೇಶಿಸಿದೆ.

ಇಂದಿರಾನಗರದಲ್ಲಿ ಅತಿ ಹೆಚ್ಚು ಶಬ್ದ ಮಾಲಿನ್ಯವಾಗುತ್ತಿರುವ ಕುರಿತು ಡಿಫೆನ್ಸ್ ಕಾಲೊನಿ  ರೆಸಿಡೆಂಟ್ಸ್ ಅಸೋಸಿಯೇಷನ್ ಸೇರಿ ಹಲವು ಸಂಘಟನೆಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎಂದು ಎ.ಎಸ್. ಓಕ ಮತ್ತು ನ್ಯಾ.ಪಿ.ಎಂ. ನವಾಜ್‌ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಪಿಐಎಲ್ ಅನ್ನು ಸಿಜೆ ಎ.ಎಸ್. ಓಕ್ ಮತ್ತು ನ್ಯಾ.ಪಿ.ಎಂ.ನವಾಜ್ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಪ್ರತಿಕ್ರಿಯಿಸಿ (+)