ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ, ಜಯಮಹಲ್‌ ರಸ್ತೆ ವಿಸ್ತರಣೆ ಇಲ್ಲ: ಪ್ರಸ್ತಾವ ಹಿಂಪಡೆದ ಬಿಬಿಎಂಪಿ

Last Updated 11 ಡಿಸೆಂಬರ್ 2022, 14:38 IST
ಅಕ್ಷರ ಗಾತ್ರ

ಬೆಂಗಳೂರು: ದಶಕದಿಂದ ಹಲವು ಅಡೆತಡೆಗಳನ್ನು ಎದುರಿಸುತ್ತಿದ್ದ ಅರಮನೆ ಮೈದಾನದ ಪ್ರದೇಶವನ್ನು ಬಳಸಿಕೊಂಡು ಜಯಮಹಲ್‌ ರಸ್ತೆ ಹಾಗೂಬಳ್ಳಾರಿರಸ್ತೆ ವಿಸ್ತರಿಸುವ ಯೋಜನೆಯನ್ನುಸರ್ಕಾರಇದೀಗ ಕೈಬಿಟ್ಟಿದೆ.ಬಿಬಿಎಂಪಿ2009ರಲ್ಲಿ ಸಲ್ಲಿಸಿದ್ದ ಪ್ರಸ್ತಾವವನ್ನೂಹಿಂಪಡೆದಿದೆ.

ಅರಮನೆ ಮೈದಾನದ ಸ್ವತ್ತಿನ ಮಾಲೀಕತ್ವ ಕುರಿತ ನ್ಯಾಯಾಲಯದಲ್ಲಿವಿವಾದವಿದೆ. ಈ ವಿವಾದ ಇತ್ಯರ್ಥವಾಗುವವರೆಗೆ ಟಿಡಿಆರ್‌ ನೀಡಲು ಅವಕಾಶವಿಲ್ಲ. ಅಲ್ಲದೆ,ಇದುಸರ್ಕಾರದ ಹಿತಾಸಕ್ತಿಗೆ ವಿರುದ್ಧವಾಗಿದೆ.ಹೀಗಾಗಿ, ಅರಮನೆ ಮೈದಾನದಭಾಗಶಃ15 ಎಕರೆ 39 ಗುಂಟೆ ಜಾಗವನ್ನು ಜಯಮಹಲ್‌ ಹಾಗೂಬಳ್ಳಾರಿರಸ್ತೆ ವಿಸ್ತರಣೆ ಉದ್ದೇಶಕ್ಕೆಬಿಬಿಎಂಪಿವಶಕ್ಕೆಪಡೆಯುವಪ್ರಸ್ತಾವವನ್ನು ಕೈಬಿಡಲಾಗಿದೆ.

ಬಿಬಿಎಂಪಿಕೂಡ 2009ರ ಮಾರ್ಚ್‌ 30ರಂದು ಸರ್ಕಾರಕ್ಕೆ ಸಲ್ಲಿಸಿದ್ದ ಈ ರಸ್ತೆ ವಿಸ್ತರಣೆ ಯೋಜನೆಯ ಪ್ರಸ್ತಾವವನ್ನುಹಿಂಪಡೆಯಲಾಗುತ್ತದೆಎಂದು ತಿಳಿಸಿರುವುದರಿಂದ, ಅದನ್ನು ಮಾನ್ಯಮಾಡಿಪ್ರಸ್ತಾವವನ್ನು ಹಿಂದಿರುಗಿಸಿಸರ್ಕಾರಡಿ.8ರಂದು ಆದೇಶ ಹೊರಡಿಸಿದೆ.

ಮುಖ್ಯಮಂತ್ರಿಬಸವರಾಜಬೊಮ್ಮಾಯಿಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ,ಬಿಬಿಎಂಪಿಬಳಿ ಲಭ್ಯವಿರುವ ಜಾಗದಲ್ಲಿಯೇ ಭೌಗೋಳಿಕ ರಚನೆಯನ್ನು ಪರಿಶೀಲಿಸಿ, ಮೇಲ್ಸೇತುವೆ, ಕೆಳಸೇತುವೆಗಳ ನಿರ್ಮಾಣದ ಮೂಲಕ ವಾಹನ ದಟ್ಟಣೆ ಪರಿಹರಿಸಬೇಕು.ಬೆಂಗಳೂರುಅರಮನೆ ಅಧಿನಿಯಮ 1996ರಲ್ಲಿ ಸ್ವತ್ತನ್ನು ರಸ್ತೆ ವಿಸ್ತರಣೆಗಾಗಿ ಕೋರುವ ಅಗತ್ಯ ಇಲ್ಲ. ಅಧಿನಿಯಮದಲ್ಲಿರುವ ಸ್ವತ್ತಿನ ಪೈಕಿ ಯಾವುದೇ ಭೂಮಿಯನ್ನುಕೋರಿಲ್ಲವಾದ್ದರಿಂದ₹1,396 ಕೋಟಿಯಷ್ಟು ಅಭಿವೃದ್ಧಿ ಹಕ್ಕುಗಳನ್ನುವಿತರಿಸಬೇಕಾಗುವುದಿಲ್ಲ. 15 ಎಕರೆ 39 ಗುಂಟೆಗೆ ₹11 ಕೋಟಿ ಪರಿಹಾರದ ಬದಲಿಗೆ ಟಿಡಿಆರ್‌ ವಿತರಿಸಿದರೆ, ಸುಪ್ರೀಂಕೋರ್ಟ್‌ ಅಧಿನಿಯಮವನ್ನು ಮಾನ್ಯ ಮಾಡಿದರೆ ಟಿಡಿಆರ್‌ ವಾಪಸ್‌ ಪಡೆಯಲು ಸಾಧ್ಯವಾಗುವುದಿಲ್ಲ.ಹೀಗಾಗಿಇರುವ ಭೂಮಿಯಲ್ಲೇಬಿಬಿಎಂಪಿಯೋಜನೆ ಕೈಗೊಳ್ಳಲಿ ಎಂದು ಆದೇಶದಲ್ಲಿ ಸೂಚಿಸಲಾಗಿದೆ.

ಅರಮನೆ ಮೈದಾನದ 15 ಎಕರೆ 39 ಗುಂಟೆಗೆ ಟಿಡಿಆರ್‌ನಿಯಯಾವಳಿಯಂತೆಸರ್ಕಾರ2016ರಸೆ. 7ರ ಹೈಕೋರ್ಟ್‌ ಆದೇಶದಂತೆ ಅನುಮೋದನೆ ನೀಡಿತ್ತು. 2021ರಫೆ.15ರಂದುಬಿಬಿಎಂಪಿಆಯುಕ್ತರು ರಸ್ತೆ ವಿಸ್ತರಣೆ ಯೋಜನೆ ಬಗ್ಗೆ ಚರ್ಚಿಸಿ ಪ್ರಸ್ತಾವವನ್ನು ಮರುಪರಿಶೀಲಿಸುವಂತೆ ಕೋರಿದ್ದರು. ಅರಮನೆ ಜಾಗಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ 2014ರಲ್ಲಿ ನೀಡಿದ್ದ ಆದೇಶವನ್ನುಅನುಷ್ಠಾನಗೊಳಿಸಲುತೊಂದರೆ ಇದೆ. ಹೀಗಾಗಿ, ಪುನರ್‌ ಪರಿಗಣಿಸಿ ಎಂದುಐಎಸಲ್ಲಿಸಲಾಗಿತ್ತು. ಸುಪ್ರೀಂಕೋರ್ಟ್‌ 2022 ಮೇ 17ರಂದು 2014ರ ಆದೇಶವನ್ನು ರದ್ದುಗೊಳಿಸಿ ಅರ್ಜಿ ವಿಲೇವಾರಿ ಮಾಡಿತ್ತು. ಈ ನಂತರ ಮುಖ್ಯಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿನಡೆಸಸಭೆಗಳಲ್ಲಿ ಟಿಡಿಆರ್‌ ನೀಡಲು ಅವಕಾಶಇಲ್ಲದಬಗ್ಗೆ ಚರ್ಚೆ ನಡೆಯಿತು. ಅಂತಿಮವಾಗಿ ಭೂಸ್ವಾಧೀನ ರಸ್ತೆ ವಿಸ್ತರಣೆ ಯೋಜನೆ ಕೈಬಿಡಲು ನಿರ್ಧರಿಸಲಾಗಿದೆ.

272 ಮರಗಳ ರಕ್ಷಣೆ!
ಮುಖ್ಯಮಂತ್ರಿ ನೇತೃತ್ವದಲ್ಲಿನಡೆದಸಭೆಯ ತೀರ್ಮಾನದಂತೆಬಿಬಿಎಂಪಿಲಭ್ಯವಿರುವ ಜಾಗದಲ್ಲೇ ರಸ್ತೆ ವಿಸ್ತರಣೆ ಕೈಗೊಳ್ಳುವುದಾಗಿ ಯೋಜನೆಯ ವಿವರವನ್ನು ಸುಪ್ರೀಂಕೋರ್ಟ್‌ಗೆ ಅ.18ರಂದು ಸಲ್ಲಿಸಿದೆ.ಅದರಂತೆ, 2009ರ ಪ್ರಸ್ತಾವ ವಾಪಸ್‌ ಪಡೆದು,ಯೋಜನೆಯನ್ನುಪುನರ್‌ಪರಿಶೀಲಿಸಲಾಗಿದೆ.

ಬಳ್ಳಾರಿರಸ್ತೆಯನ್ನುಬಿಡಿಎವೃತ್ತದಿಂದಮೇಖ್ರಿವೃತ್ತದವರೆಗೆ ವಿಸ್ತರಣೆ ಮಾಡಿದರೆ, ವಿವಿಧ ಅಗಲ ರಸ್ತೆಯಾಗಿ ದಟ್ಟಣೆ ಹೆಚ್ಚಾಗುತ್ತದೆ.ಮೇಖ್ರಿವೃತ್ತದಲ್ಲಿ ರಕ್ಷಣಾ ಇಲಾಖೆ ಭೂಮಿಯನ್ನೂ ಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಆದ್ದರಿಂದ ಈ ರಸ್ತೆ ವಿಸ್ತರಣೆಯನ್ನು ಕೈಬಿಟ್ಟು,ಮೇಖ್ರಿವೃತ್ತದಿಂದಬಿಡಿಎವೃತ್ತದವರೆಗೆ ಏಕರೂಪ ರಸ್ತೆಯನ್ನು ಲಭ್ಯವಿರುವ ರಸ್ತೆಯ ಒಟ್ಟು ಅಗಲ ಬಳಸಿಕೊಂಡು ಪುನರ್‌ ವಿನ್ಯಾಸಗೊಳಿಸಿ ನಿರ್ಮಿಸಲು ಉದ್ದೇಶಿಸಿದೆ.ಹೀಗೆಮಾಡುವುದರಿಂದ 172 ಮರಗಳನ್ನು ತೆರವು ಮಾಡುವ ಬದಲು, 58 ಮರಗಳನ್ನು ಮಾತ್ರ ತೆರವು ಮಾಡಬೇಕಾಗುತ್ತದೆ. 124 ಮರಗಳನ್ನು ಉಳಿಸಬಹುದು ಎಂದುಬಿಬಿಎಂಪಿಪ್ರಸ್ತಾವದಲ್ಲಿತಿಳಿಸಿದೆ.

ಜಯಮಹಲ್‌ ರಸ್ತೆಯನ್ನುಮೇಖ್ರಿವೃತ್ತದಿಂದ ಕಂಟೋನ್ಮೆಂಟ್‌ರೈಲ್ವೆನಿಲ್ದಾಣದವರೆಗೆವಿಸ್ತರಿಸುವ ಯೋಜನೆಯನ್ನು ಪುನರ್‌ಪರಿಶೀಲಿಸಿ, ರಕ್ಷಣಾ ಇಲಾಖೆ,ಸಿ.ವಿ. ರಾಮನ್‌ ಸಂಶೋಧನಾ ಸಂಸ್ಥೆಯಭೂಸ್ವಾಧೀನವನ್ನುಕೈಬಿಟ್ಟು ಲಭ್ಯವಿರುವ ರಸ್ತೆಯ ಒಟ್ಟು ಅಗಲ ಬಳಸಿಕೊಂಡು ಪುನರ್‌ ವಿನ್ಯಾಸಗೊಳಿಸಲು ಉದ್ದೇಶಿಸಲಾಗಿದೆ. ಅಲ್ಲದೆ, ಹಿಂದಿನ ಯೋಜನೆಯಂತೆ 162 ಮರಗಳನ್ನುತೆರವುಗೊಳಿಸಬೇಕಾಗಿದ್ದು, ಇದೀಗ 14 ಮರಗಳನ್ನು ಮಾತ್ರ ತೆರವುಗೊಳಿಸಿ 148 ಮರಗಳನ್ನುಉಳಿಸಬಹುದಾಗಿದೆಎಂದುಬಿಬಿಎಂಪಿಹೇಳಿದೆ.

ಬಳ್ಳಾರಿಮತ್ತು ಜಯಮಹಲ್‌ ರಸ್ತೆಗಳ ವಿಸ್ತರಣೆ ಕಾಮಗಾರಿಗೆ ₹56 ಕೋಟಿ ಒದಗಿಸಲಾಗಿದ್ದುಜೆಎಂಸಿಸಂಸ್ಥೆ ಏಕರೂಪ ಅಗಲ ರಸ್ತೆಯ ಕಾಮಗಾರಿ ನಡೆಸುತ್ತಿದೆ.ಹೀಗಾಗಿ, 15 ಎಕರೆ 39 ಗುಂಟೆ ಭೂಸ್ವಾಧೀನದ ಯೋಜನೆ ಪ್ರಸ್ತಾವ ಕೈಬಿಡಲಾಗಿದೆ ಎಂದುಬಿಬಿಎಂಪಿವಿವರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT