ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉತ್ತರ ಕರ್ನಾಟಕ ಸ್ನೇಹಲೋಕ: ಉದ್ಯಮ ಸ್ಥಾಪನೆ ಬಗ್ಗೆ ಸಲಹೆ ನೀಡಿದ ಗಂಗಾಧರ್ ವಾಲಿ

Last Updated 21 ಸೆಪ್ಟೆಂಬರ್ 2022, 9:11 IST
ಅಕ್ಷರ ಗಾತ್ರ

ಬೆಂಗಳೂರು: ಉತ್ತರ ಕರ್ನಾಟಕ ಸ್ನೇಹಲೋಕ (UKSL) ಟ್ರಸ್ಟ್ ವತಿಯಿಂದ 5ನೇಉತ್ತರ ಕರ್ನಾಟಕ ಉದ್ಯಮಿಗಳ ಮೇಳ ನಡೆಯಿತು.

ಇಲ್ಲಿನ ಹೋಟೆಲ್ ಪರಾಗ್ ಸಭಾಂಗಣದಲ್ಲಿ ಜರುಗಿದ ಈ ಕಾರ್ಯಕ್ರಮದಲ್ಲಿಉತ್ತರ ಕರ್ನಾಟಕ ಮೂಲದ ಉದ್ಯಮಿಗಳು ಪಾಲ್ಗೊಂಡಿದ್ದರು.

ಉತ್ತರ ಕರ್ನಾಟಕ ಸ್ನೇಹಲೋಕ ಟ್ರಸ್ಟ್ ಅಧ್ಯಕರಾದಗಂಗಾಧರ್ ವಾಲಿ ಅವರು ಟ್ರಸ್ಟ್ ನಡೆದು ಬಂದ ದಾರಿಯನ್ನು ವಿವರಿಸುವುದರಜೊತೆಗೆ ಟ್ರಸ್ಟ್ ಕೈಗೊಂಡ ಹತ್ತು ಹಲವಾರುಸಮಾಜಮುಖಿ ಕಾರ್ಯಕ್ರಮಗಳ ಬಗ್ಗೆ ವಿವರಣೆ ನೀಡಿದರು.

ರಾಜ್ಯ ಸರ್ಕಾರದ ಕೈಗಾರಿಕಾ ಇಲಾಖೆಯ "ಉದ್ಯೋದ ಮಿತ್ರ" ದ ವ್ಯವಸ್ಥಾಪಕ ನಿರ್ದೇಶಕರಾದ ದೊಡ್ಡಬಸವರಾಜು ಅವರು ಮಾತನಾಡಿ ಅತೀ ಸಣ್ಣ, ಸಣ್ಣ ಮತ್ತು ಮಾಧ್ಯಮ ಉದ್ದಿಮೆಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೀಡಿರುವ ಹಲವಾರು ಮೂಲಭೂತ ಸೌಕರ್ಯ, ಸವಲತ್ತು ಮತ್ತು ಸಹಾಯ ಧನದ ಬಗ್ಗೆವಿವರಣೆ ನೀಡಿದರು.

"ರೋಬೋಸಾಫ್ಟ್" ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಮತ್ತು ಬ್ರಾಂಡಿಂಗ್ ತಜ್ಞರಾದಲಕ್ಷ್ಮೀಪತಿ ಭಟ್ಮಾತನಾಡಿತಮ್ಮದೇ ಆದ ಬ್ರಾಂಡಿಂಗ್ ಮಾಡಿಕೊಳ್ಳುವಲ್ಲಿ ಮತ್ತು ಮಾರುಕಟ್ಟೆ ವಿಸ್ತರಣೆಬಗ್ಗೆ ಅನೇಕ ಸಲಹೆ ಸೂಚನೆ ನೀಡುವದರ ಜೊತೆಗೆ ನೆರೆದ ಉದ್ಯಮಿಗಳ ಎಲ್ಲಾ ಪ್ರಶ್ನೆ ಮತ್ತು ಸಂದೇಹಗಳಿಗೆಉತ್ತರ ನೀಡಿದರು.

ಪ್ರಗತಿಪರ ರೈತ ಹಾಗೂ ಕೃಷಿ ಮತ್ತು ತೋಟಗಾರಿಕಾ ತಜ್ಞರಾದಶ್ರೀವತ್ಸ ರೆಡ್ಡಿಮಾತನಾಡಿ ಆಹಾರದ ಅಘಾದ ಸಮಸ್ಯೆಯನ್ನು ನಿವಾರಿಸಲು ಎಲ್ಲರೂ ಕೃಷಿಯತ್ತ ಮುಖಮಾಡುವ ಅಗತ್ಯತೆಯ ಬಗ್ಗೆ ವಿವರಿಸಿದರು. ಅಲ್ಲದೇ ನೆರೆದ ಉದ್ಯಮಿಗಳನ್ನು ಕೃಷಿರಂಗದಲ್ಲಿ ಬಂಡವಾಳ ಹೂಡಲು ಉತ್ತೇಜಿಸಿದರು.

"ಉದ್ಯಮಿಗಳ ಮಿಲನ" ಕಾರ್ಯಕ್ರಮದಲ್ಲಿಸಂದೀಪ್ ಪರ್ವತಿಕರ್, ಮಹೇಶ್ ತುಪ್ಪದ, ಆನಂದ್ ಭಟ್ ಮತ್ತು ಡಾ. ಸುರೇಶ ಅಡಿಗ ಅವರು ಉದ್ದಿಮೆಗಳ ಸ್ಥಾಪನೆ, ಹಣಕಾಸು ನಿರ್ವಹಣೆ, ಸರಕಾರದ ಮಾರ್ಗಸೂಚಿ ಪರಿಪಾಲನೆ, ನೌಕರರ ನಿರ್ವಹಣೆ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT