ಶನಿವಾರ, ಆಗಸ್ಟ್ 17, 2019
24 °C

ಅತೃಪ್ತ ನಾಲ್ವರು ಶಾಸಕರಿಗೆ ನೋಟಿಸ್‌?

Published:
Updated:

ಬೆಂಗಳೂರು: ಅತೃಪ್ತ ನಾಲ್ವರು ಶಾಸಕರಿಗೆ ವಿಧಾನಸಭಾಧ್ಯಕ್ಷ ಕೆ.ಆರ್‌. ರಮೇಶ್ ಕುಮಾರ್‌ ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ.

ರಮೇಶ ಜಾರಕಿಹೊಳಿ, ಮಹೇಶ ಕುಮಠಳ್ಳಿ, ಬಿ.ಸಿ. ಪಾಟೀಲ ಮತ್ತು ಆರ್‌. ಶಂಕರ್‌ ಅವರಿಗೆ ನೋಟಿಸ್‌ ನೀಡಿರುವ ಸಭಾಧ್ಯಕ್ಷರು, ‘ಪಕ್ಷಾಂತರ ನಿಷೇಧ ಕಾಯ್ದೆಯಡಿ ನಿಮ್ಮನ್ನು ಏಕೆ ಅನರ್ಹಗೊಳಿಸಬಾರದು ಎಂದು ವಿವರಣೆ ಕೇಳಿದ್ದಾರೆ’ ಎಂದು ಗೊತ್ತಾಗಿದೆ.

ಈಗಾಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಈ ಶಾಸಕರು, ಮುಂಬೈಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಈ ಪೈಕಿ, ರಾಣೆಬೆನ್ನೂರು ಕ್ಷೇತ್ರದಿಂದ ಕೆಪಿಜೆಪಿಯಿಂದ ಆರಿಸಿ ಬಂದಿರುವ ಶಂಕರ್‌, ತಮ್ಮ ಪಕ್ಷವನ್ನು ಕಾಂಗ್ರೆಸ್‌ ಜೊತೆ ವಿಲೀನಗೊಳಿಸಿದ್ದರು.

Post Comments (+)