ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಸವಣ್ಣನವರಷ್ಟೇ ಎಲ್ಲ ಶರಣರು ಪೂಜ್ಯರು: ಪಿನಾಕಪಾಣಿ

Published 24 ಆಗಸ್ಟ್ 2024, 15:19 IST
Last Updated 24 ಆಗಸ್ಟ್ 2024, 15:19 IST
ಅಕ್ಷರ ಗಾತ್ರ

ಬೆಂಗಳೂರು: ‘ವಚನಕಾರರಲ್ಲಿ ಯಾವುದೇ ರೀತಿಯ ತಾರತಮ್ಯವಿರಲಿಲ್ಲ. ಬಸವಣ್ಣನವರಷ್ಟೇ ಎಲ್ಲ ಶರಣರು ಪೂಜ್ಯರು, ಗೌರವಾರ್ಹರಾಗಿದ್ದರು’ ಎಂದು ವಚನಜ್ಯೋತಿ ಬಳಗದ ಅಧ್ಯಕ್ಷ ಪಿನಾಕಪಾಣಿ ಹೇಳಿದರು.

ವಚನಜ್ಯೋತಿ ಬಳಗ ಶನಿವಾರ ಆಯೋಜಿಸಿದ್ದ ‘ನುಲಿಯ ಚಂದಯ್ಯನವರ ಜಯಂತಿ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಸರ್ಕಾರ ನುಲಿಯ ಚಂದಯ್ಯನವರ ಜಯಂತಿಯನ್ನು ಘೋಷಣೆ ಮಾಡಿದಾಗ ಚಂದಯ್ಯನವರು ಯಾವ ವರ್ಗಕ್ಕೆ ಸೇರಿದವರು ಎನ್ನುವುದು ಗೊತ್ತಾಯಿತು. ನುಲಿಯ ಚಂದಯ್ಯನವರು ಕಾಯಕಶೀಲದ ಶಿಖರವಾಗಿದ್ದರು. ಲಿಂಗದೇವರನ್ನು ಧಿಕ್ಕರಿಸಿ, ಕಾಯಕ ದೇವರಿಗೆ ಒತ್ತು ಕೊಟ್ಟು ವಚನಗಳ ಸಂರಕ್ಷಣೆಯಲ್ಲಿ ಅಕ್ಕನಾಗಮ್ಮನವರೊಂದಿಗೆ ಹೆಗಲು ಕೊಟ್ಟಿದ್ದರು’ ಎಂದು ಹೇಳಿದರು.

ಪ್ರಾಧ್ಯಾಪಕ ಎಚ್.ಎಂ. ಸೋಮಶೇಖರಪ್ಪ ಮಾತನಾಡಿ, ‘ವಚನಗಳು ಬದುಕಿನ ಎಲ್ಲ ಆಯಾಮಗಳನ್ನು ಒಳಗೊಂಡಿದ್ದು, ವೈಜ್ಞಾನಿಕ ತಳಹದಿಯಲ್ಲಿ ವಚನ ಧರ್ಮ ರೂಪುಗೊಂಡಿದೆ. ತರೀಕೆರೆ ತಾಲ್ಲೂಕಿನ ನಂದ್ರಿ ಗ್ರಾಮದಲ್ಲಿ ನುಲಿಯ ಚಂದಯ್ಯನವರ ಜಾತ್ರೆಯನ್ನು ಎಲ್ಲ ವರ್ಗದ ಜನರು ಸೇರಿ ಸಂಭ್ರಮದಿಂದ ಆಚರಿಸುತ್ತಿದ್ದಾರೆ’ ಎಂದು ತಿಳಿಸಿದರು.

ವಚನ ಕಲಿಕಾ ತರಗತಿಯ ವಿದ್ಯಾರ್ಥಿಗಳು ನುಲಿಯ ಚಂದಯ್ಯನವರ ವಚನಗಳನ್ನು ಹಾಡಿದರು. ಎಸ್.ಎಲ್.ಎನ್ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಎಸ್.ಸಿ. ಗಂಗರೇವಯ್ಯ ಅವರನ್ನು ಅಭಿನಂದಿಸಲಾಯಿತು.

ವಚನಜ್ಯೋತಿ ಬಳಗದ ಪ್ರಭು ಇಸುವನಹಳ್ಳಿ, ರಾಜಾ ಗುರುಪ್ರಸಾದ್, ಪ್ರಸನ್ನ, ಮಧು ಶಿವಕುಮಾರ್, ಜಾಗತಿಕ ಲಿಂಗಾಯತದ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷ ಜಯಬಸವ, ಸರ್ವಾಣಿ ಯೋಗೀಶ್, ಸರೋಜಾ ನಂದೀಶ್, ಪುಷ್ಪಾ ಸೋಮಶೇಖರ್ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT