ಓಕ್‌ರಿಡ್ಜ್‌ ಶಾಲೆಯಲ್ಲಿ ‘ಆಕ್ಸ್‌ಫರ್ಡ್‌ ಕೋರ್ಸ್‌’

7

ಓಕ್‌ರಿಡ್ಜ್‌ ಶಾಲೆಯಲ್ಲಿ ‘ಆಕ್ಸ್‌ಫರ್ಡ್‌ ಕೋರ್ಸ್‌’

Published:
Updated:
ಆಕ್ಸ್‌ಫರ್ಡ್‌ನ ನುರಿತ ಶಿಕ್ಷಕರಿಂದ ಬೋಧನೆ

ಬೆಂಗಳೂರು: ವಿದ್ಯಾರ್ಥಿಗಳನ್ನು ಜಾಗತಿಕ ಮಟ್ಟದ ಸ್ಪರ್ಧೆಗೆ ಸಿದ್ಧಗೊಳಿಸುವ ಭಾಗವಾಗಿ ಓಕ್‌ರಿಡ್ಜ್‌ ಅಂತರರಾಷ್ಟ್ರೀಯ ಶಾಲೆ ಬೆಂಗಳೂರು ಕ್ಯಾಂಪಸ್‌ನಲ್ಲಿ 10 ದಿನಗಳ ‘ಆಕ್ಸಫರ್ಡ್‌ ಬೇಸಿಗೆ ಕೋರ್ಸ್‌’ ಅನ್ನು ಆಯೋಜಿಸಿತ್ತು.

‘ಇದೇ ಜೂನ್‌ 15ರಿಂದ 24ರವರೆಗೆ ತರಗತಿಗಳು ನಡೆದವು. ಈ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಜಗತ್ತಿನ ಪ್ರಮುಖ ವಿಶ್ವವಿದ್ಯಾಲಯಗಳ ಶಿಕ್ಷಣ ಪದ್ಧತಿಯ ಪರಿಚಯವಾಗುತ್ತದೆ. ಆಕ್ಸಫರ್ಡ್‌ನ ಬೋಧನ ವಿಧಾನಗಳ ಬಗ್ಗೆ  ತಿಳಿದುಕೊಳ್ಳಲು ಈ ತರಗತಿಗಳು ನೆರವಾದವು’ ಎಂದು ಶಾಲೆ ಪ್ರಕಟಣೆಯಲ್ಲಿ ತಿಳಿಸಿದೆ.

ದೇಶದ 55 ಶಾಲೆಗಳ 85 ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಂಡಿದ್ದರು. ವೈದ್ಯಕೀಯ, ನಾಯಕತ್ವ, ಕಾನೂನು, ಸೃಜನಾತ್ಮಕ ಬರವಣಿಗೆ ಮತ್ತು ವ್ಯಾಪಾರ–ಉದ್ಯೋಗ... ಹೀಗೆ ವಿವಿಧ ಆಸಕ್ತಿದಾಯಕ ವಿಷಯಗಳ ಬಗ್ಗೆ ತಿಳಿದುಕೊಳ್ಳುವ ಅವಕಾಶ ಇತ್ತು.  ಪ್ರಚಲಿತ ವಿಷಯಗಳ ಕುರಿತ ಚರ್ಚೆ, ವಿಷಯವಾರು ಕಾರ್ಯಾಗಾರಗಳು, ನಾಟಕದಂತಹ ಚಟುವಟಿಕೆಗಳು ನಡೆದವು.

‘ಈ ಕೋರ್ಸ್‌ನಿಂದಾಗಿ ವಿದ್ಯಾರ್ಥಿಗಳು ಸಾಕಷ್ಟು ಕಲಿತಿದ್ದಾರೆ. ಪ್ರಚಲಿತ ವಿಷಯಗಳ ಬಗ್ಗೆ ಮಕ್ಕಳಿಗಿದ್ದ ಆಸಕ್ತಿ ಹಾಗೂ ಜ್ಞಾನ ನಮ್ಮನ್ನು ಬೆರಗುಗೊಳಿಸಿತು’ ಎಂದು ಓಕ್‌ರಿಡ್ಜ್‌ ಶಾಲೆಯ ಪ್ರಾಂಶುಪಾಲೆ ಹೇಮಾ ಚೆನ್ನಪತಿ ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !