ಬಾಲೇಶ್ವರ: ಒಡಿಶಾದ ಪುರಿಗೆ ಬಸ್ನಲ್ಲಿ ತೆರಳುತ್ತಿದ್ದ ಬೆಂಗಳೂರಿನ 20 ಪ್ರವಾಸಿಗರು ಮಾರ್ಗಮಧ್ಯೆ ಅಸ್ವಸ್ಥಗೊಂಡಿದ್ದಾರೆ.

ಈ ಪ್ರವಾಸಿಗರನ್ನು ಸೊರೊ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ರಾತ್ರಿ ಊಟ ಮುಗಿಸಿಕೊಂಡು ಬಸ್ನಲ್ಲಿ ಪುರಿಗೆ ತೆರಳುತ್ತಿದ್ದಾರೆ ಬಾಲೇಶ್ವರ ಜಿಲ್ಲೆಯ ಸೊರೊ ಎಂಬಲ್ಲಿ ಈ ಘಟನೆ ನಡೆದಿದೆ.

ಬೆಂಗಳೂರು ಮೂಲದ ಸುಮಾರು 50 ಯಾತ್ರಿಕರು ಬಸ್ ಧಾರ್ಮಿಕ ಕ್ಷೇತ್ರಗಳ ಪ್ರವಾಸ ಕೈಗೊಂಡಿದ್ದರು. ಏಪ್ರಿಲ್ 26ರಂದು ಗಯಾದಿಂದ ಪುರಿಗೆ ಬರುತ್ತಿದ್ದರು. ಸೊರೊ ಎಂಬಲ್ಲಿ ತಾವೇ ತಯಾರಿಸಿದ್ದ ಅನ್ನ ಮತ್ತು ಸಾಂಬರ್ ಸೇವಿಸಿದ್ದರು. ಬಸ್ ಸೊರೊ ನಗರ ತಲುಪುವಷ್ಟರಲ್ಲಿ 20 ಪ್ರವಾಸಿಗರು ವಾಂತಿ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರವಾಸಿಗರ ಅಸ್ವಸ್ಥತೆಗೆ ಬಿಸಿಗಾಳಿ ಕಾರಣವಿರಬಹುದು ಎಂದು ವೈದ್ಯರು ಶಂಕೆ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.