ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆತ್ತಲೆ ವಿಡಿಯೊ ಬ್ಲ್ಯಾಕ್‌ಮೇಲ್‌’ಗೆ ಹೆದರಿ ವೈದ್ಯ ಆತ್ಮಹತ್ಯೆ

ರೈಲ್ವೆ ಪೊಲೀಸರಿಂದ ತನಿಖೆ; ಆರೋಪಿಗಾಗಿ ಹುಡುಕಾಟ
Last Updated 13 ಜನವರಿ 2022, 19:42 IST
ಅಕ್ಷರ ಗಾತ್ರ

ಬೆಂಗಳೂರು: ಸೈಬರ್ ವಂಚಕರ ‘ಬೆತ್ತಲೆ ವಿಡಿಯೊ’ ಬ್ಲ್ಯಾಕ್‌ಮೇಲ್‌ಗೆ ಹೆದರಿ ನಗರದ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದು, ಬೆಂಗಳೂರು ನಗರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದ 30 ವರ್ಷದ ವೈದ್ಯ, ಹಳಿ ಮೇಲೆ ರೈಲಿಗೆ ತಲೆಕೊಟ್ಟು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನಾ ಸ್ಥಳದಲ್ಲಿ ದೊರೆತ ಮರಣಪತ್ರ ಆಧರಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಪೋಷಕರ ವಿನಂತಿ ಮೇರೆಗೆ ವೈದ್ಯನ ಹೆಸರು ಗೋಪ್ಯವಾಗಿರಿಸಲಾಗಿದೆ’ ಎಂದು ರೈಲ್ವೆ ಪೊಲೀಸ್ ಹಿರಿಯ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಹಲವು ಸಾಮಾಜಿಕ ಮಾಧ್ಯಮಗಳಲ್ಲಿ ವೈದ್ಯ ಖಾತೆಗಳನ್ನು ತೆರೆದಿದ್ದರು. ಯುವತಿ ಹೆಸರಿನಲ್ಲಿ ನಕಲಿ ಖಾತೆ ತೆರೆದಿದ್ದ ಸೈಬರ್ ವಂಚಕರು, ಅದೇ ಖಾತೆಯಿಂದ ವೈದ್ಯನಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದರು. ಅದನ್ನು ಸ್ವೀಕರಿಸಿದ್ದ ವೈದ್ಯ, ಆ ಖಾತೆಯಿಂದ ಬಂದ ಸಂದೇಶಗಳಿಗೆ ಪ್ರತಿಕ್ರಿಯಿಸಲಾರಂಭಿಸಿದ್ದರು’ ಎಂದೂ ಹೇಳಿದರು.

‘ಯುವತಿಯೊಬ್ಬರ ಫೋಟೊ ಬಳಸಿ ಸಂದೇಶ ಕಳುಹಿಸುತ್ತಿದ್ದ ವಂಚಕರು, ನಗ್ನ ವಿಡಿಯೊ ಬಳಸಿ ರಾತ್ರಿ ಸಮಯದಲ್ಲಿ ಕರೆ ಮಾಡಿದ್ದರು. ವೈದ್ಯ ಕೂಡ ಪ್ರಚೋದನೆಗೆ ಒಳಗಾಗಿ ತಮ್ಮ ಬಟ್ಟೆ ಕಳಚಿ ನಗ್ನರಾಗಿದ್ದರು. ಅದೇ ವಿಡಿಯೊವನ್ನು ಆರೋಪಿಗಳು ಚಿತ್ರೀಕರಿಸಿಕೊಂಡು ಕೇಳಿದಷ್ಟು ಹಣ ಕೊಡಬೇಕು. ಇಲ್ಲದಿದ್ದರೆ, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೊ ಹರಿಬಿಡುತ್ತೇವೆ’ ಎಂದು ಬ್ಲ್ಯಾಕ್‌ಮೇಲ್ ಮಾಡಿದ್ದರು. ಇದಕ್ಕೆ ಹೆದರಿದ್ದ ವೈದ್ಯ, ಆರಂಭದಲ್ಲಿ ಸ್ವಲ್ಪ ಹಣ ಕೊಟ್ಟಿದ್ದರು ’ ಎಂದೂ ಅಧಿಕಾರಿ ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT