ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನ್‌ಲೈನ್ ಉದ್ಯೋಗ ವಂಚನೆ ಹಗರಣ: ಇ.ಡಿ ಶೋಧ

80 ಬ್ಯಾಂಕ್ ಖಾತೆಗಳಲ್ಲಿ ₹1 ಕೋಟಿ ಮೊತ್ತ: ಮುಂದುವರಿದ ತನಿಖೆ
Last Updated 17 ನವೆಂಬರ್ 2022, 19:25 IST
ಅಕ್ಷರ ಗಾತ್ರ

ಬೆಂಗಳೂರು: ಅರೆಕಾಲಿಕ ಉದ್ಯೋಗ ನೀಡುವ ನೆಪದಲ್ಲಿ ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಹಗರಣದ ತನಿಖೆ ಮುಂದುವರಿಸಿರುವ ಜಾರಿ ನಿರ್ದೇಶನಾಲಯ(ಇ.ಡಿ), ನಗರದ 16 ಕಡೆ ಶೋಧ ನಡೆಸಿದೆ.

ಸೋಮವಾರದಿಂದ ಶೋಧ ಕಾರ್ಯ ನಡೆಸಿರುವ ಇ.ಡಿ ಅಧಿಕಾರಿಗಳು, ಆರೋಪಿಗಳ ಮನೆ, ಅವರು ಹಣ ವರ್ಗಾವಣೆಗೆ ಬಳಸುತ್ತಿದ್ದ ಫೋನ್‌ ಪೇ, ಗೂಗಲ್ ಪೇ, ಪೇಟಿಎಂ, ಅಮೆಜಾನ್ ಪೇ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ. ಎಚ್‌ಡಿಎಫ್‌ಸಿ, ಐಸಿಐಸಿಐ, ಧನಲಕ್ಷ್ಮಿ ಬ್ಯಾಂಕ್‌ಗಳಲ್ಲಿನ ಇವರ ಖಾತೆಗಳನ್ನೂ ಪರಿಶೀಲನೆ ನಡೆಸುತ್ತಿದ್ದಾರೆ. 80ಕ್ಕೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ಆರೋಪಿಗಳು ಹೊಂದಿದ್ದು, ಈ ಎಲ್ಲಾ ಖಾತೆಗಳಿಂದ ಒಟ್ಟು ₹1 ಕೋಟಿಯಷ್ಟು ಮೊತ್ತ ಇದೆ. ಖಾತೆಯ ವ್ಯವಹಾರ ಸ್ಥಗಿತಗೊಳಿಸಲಾಗಿದೆ ಎಂದು ಇ.ಡಿ ಅಧಿಕಾರಿಗಳು ವಿವರಿಸಿದ್ದಾರೆ.

‘ಸೂಪರ್ ಲೈಕ್‌’ ಆ್ಯಪ್‌ಗೆ ಸಂಬಂಧಿಸಿದವರು ಮತ್ತು ಇತರ ಆರೋಪಿಗಳ ವಿರುದ್ಧ ಬೆಂಗಳೂರು ದಕ್ಷಿಣ ಸೈಬರ್‌ ಪೊಲೀಸ್ ಠಾಣೆಯಲ್ಲಿ 2021ರಲ್ಲಿ ಎಫ್‌ಐಆರ್ ದಾಖಲಾಗಿತ್ತು. ಇದನ್ನು ಆಧರಿಸಿ ಅಕ್ರಮ ಹಣ ವರ್ಗಾವಣೆ ಕಾಯ್ದೆಯಡಿ ತನಿಖೆ ಆರಂಭಿಸಿದ ಇ.ಡಿ ಅಧಿಕಾರಿಗಳು, ತನಿಖೆ ಮುಂದುವರಿಸಿದ್ದಾರೆ.

‘ಸೂಪರ್ ಲೈಕ್’ ಎಂಬ ಆ್ಯಪ್ ಆಧಾರಿತ ಕಂಪನಿಯು ತನ್ನಗ್ರಾಹಕರಿಂದ ಹಣ ಹೂಡಿಕೆ ಮಾಡಿಸಿಕೊಂಡು ಗಣ್ಯರ ಪೋಟೊ ಮತ್ತು ವಿಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೆ ಮಾಡಿಸುತ್ತಿತ್ತು. ಪ್ರತಿ ಹಂಚಿಕೆಗೂ ಇಂತಿಷ್ಟು ಲಾಭಾಂಶ ನೀಡುತ್ತಿತ್ತು. ಇದರಿಂದ ಆಕರ್ಷಿತರಾದ ಗ್ರಾಹಕರು ಹೆಚ್ಚು ಹೆಚ್ಚು ಹಣ ಹೂಡಿಕೆ ಮಾಡುತ್ತಿದ್ದರು. ಕೆಲ ದಿನಗಳ ಬಳಿಕ ಲಾಭಾಂಶ ಬರುವುದು ಸ್ಥಗಿತವಾಯಿತು. ಹೂಡಿಕೆ ಮಾಡಿದ್ದ ಹಣ ವಾಪಸ್ ಪಡೆಯಲು ಗ್ರಾಹಕರು ಮುಂದಾದರು. ಆದರೆ, ಈ ಆ್ಯಪ್‌ನಲ್ಲಿ ಹಣ ವಹಿವಾಟು ಸ್ಥಗಿತವಾಗಿದೆ ಎಂಬ ಪ್ರತಿಕ್ರಿಯೆ ಬರಲಾರಂಭಿಸಿತು. ಬಳಿಕ ಗ್ರಾಹಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದರು’ ಎಂದು ಇ.ಡಿ ವಿವರಿಸಿದೆ.

ಪ್ರಕರಣ ತನಿಖೆ ನಡೆಸಿದ್ದ ಪೊಲೀಸರು, ಇಬ್ಬರು ಚೀನಾ ಪ್ರಜೆಗಳಾದಶೆನ್ ಲಾಂಗ್ ಮತ್ತು ಹಿಮಾನಿ ಸೇರಿ 50 ಆರೋಪಿಗಳ ವಿರುದ್ಧ ದೋಷಾರೋಪಣೆಯನ್ನುನ್ಯಾಯಾಲಯಕ್ಕೆ ಜನವರಿಯಲ್ಲಿ ಸಲ್ಲಿಸಿದ್ದರು. ಬಳಿಕ ಇ.ಡಿ. ತನಿಖೆ ಆರಂಭಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT