‘ಆನ್ಲೈನ್ ಮದ್ಯ ಮಾರಾಟ ಮಳಿಗೆಗಾಗಿ ಜಾಲತಾಣವೊಂದರಲ್ಲಿ ಹುಡುಕಾಟ ನಡೆಸಿದ್ದರು. ಅಲ್ಲಿ ದೂರೆತ ಮೊಬೈಲ್ ಸಂಖ್ಯೆಗೆ ಕರೆ ಮಾಡಿ, ಮದ್ಯ ಕಾಯ್ದಿರಿಸಿದ್ದರು. ಮದ್ಯವನ್ನು ಮನೆಗೆ ಕಳುಹಿಸುವುದಾಗಿ ಹೇಳಿದ್ದ ಆರೋಪಿಗಳು, ಡೆಬಿಟ್ ಕಾರ್ಡ್ ಹಾಗೂ ಒಟಿಪಿ ಪಡೆದುಕೊಂಡಿದ್ದರು. ಇದಾದ ನಂತರ, ದೂರುದಾರರ ಎಚ್ಡಿಎಫ್ಸಿ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ₹ 89,545 ಕಡಿತವಾಗಿದೆ’ ಎಂದೂ ತಿಳಿಸಿದರು.