ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆನ್‌ಲೈನ್‌’ ಅರೆಕಾಲಿಕ ಕೆಲಸ: ₹ 19.67 ಲಕ್ಷ ವಂಚನೆ

Last Updated 19 ಅಕ್ಟೋಬರ್ 2021, 7:16 IST
ಅಕ್ಷರ ಗಾತ್ರ

ಬೆಂಗಳೂರು: ‘ಆನ್‌ಲೈನ್’ ಅರೆಕಾಲಿಕ ಕೆಲಸದ (ಪಾರ್ಟ್‌ ಟೈಂ ಜಾಬ್) ಆಮಿಷವೊಡ್ಡಿ ನಗರದ ಮಹಿಳೆಯೊಬ್ಬರಿಂದ ₹ 19.67 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ಆಗ್ನೇಯ ವಿಭಾಗದ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮಡಿವಾಳ ಮಾರುತಿನಗರದ 33 ವರ್ಷದ ಮಹಿಳೆ ವಂಚನೆ ಬಗ್ಗೆ ದೂರು ನೀಡಿದ್ದಾರೆ. ಅಪರಿಚಿತರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ಹೇಳಿದರು.

‘ಗೃಹಿಣಿಯಾದ ಮಹಿಳೆ, ಮನೆಯಿಂದಲೇ ಅರೆಕಾಲಿಕ ಕೆಲಸ ಮಾಡಿ ಹಣ ಸಂಪಾದಿಸಲು ಮುಂದಾಗಿದ್ದರು. ಇದಕ್ಕಾಗಿ ಆನ್‌ಲೈನ್‌ನಲ್ಲಿ ಹುಡುಕಾಡಿದ್ದರು. ಜಾಲತಾಣವೊಂದರ ಮೂಲಕ ಆರೋಪಿಗಳ ಪರಿಚಯವಾಗಿತ್ತು.’

‘ಉತ್ಪನ್ನಗಳ ಮಾರಾಟದಿಂದ ಕೈ ತುಂಬ ಕಮಿಷನ್ ಪಡೆಯಬಹುದೆಂದು ಹೇಳಿದ್ದ ಆರೋಪಿಗಳು, ಅರ್ಜಿ ನಮೂನೆ ಭರ್ತಿ ಮಾಡುವಂತೆ ಲಿಂಕ್‌ ಕಳುಹಿಸಿದ್ದರು. ಆರೋಪಿಗಳ ಮಾತು ನಂಬಿದ್ದ ಮಹಿಳೆ, ಲಿಂಕ್ ತೆರೆದು ವೈಯಕ್ತಿಕ ಮಾಹಿತಿ ಭರ್ತಿ ಮಾಡಿದ್ದರು’ ಎಂದೂ ತಿಳಿಸಿದರು.

‘ನೋಂದಣಿ ಹಾಗೂ ಇತರೆ ಶುಲ್ಕ ಪಾವತಿಸುವಂತೆ ಹೇಳಿದ್ದ ಆರೋಪಿಗಳು, ಮಹಿಳೆಯಿಂದ ಹಂತ ಹಂತವಾಗಿ ₹ 19.67 ಲಕ್ಷ ಪಡೆದಿದ್ದರು. ಇದಾದ ನಂತರ ಆರೋಪಿಗಳು ಯಾವುದೇ ಕೆಲಸ ನೀಡಿಲ್ಲ. ಸಂಪರ್ಕಕ್ಕೂ ಸಿಕ್ಕಿಲ್ಲ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT