ಗುರುವಾರ , ನವೆಂಬರ್ 14, 2019
19 °C

ಸಾರಿಗೆ ಅಧಿಕಾರಿಗಳ ಕಾರ್ಯಾಚರಣೆ 120 ವಾಹನಗಳ ವಿರುದ್ಧ ಪ್ರಕರಣ

Published:
Updated:

ಬೆಂಗಳೂರು: ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುವ ಸರಕು ಸಾಗಣೆ ವಾಹನಗಳ ಪತ್ತೆಗಾಗಿ ವಿಶೇಷ ಕಾರ್ಯಾಚರಣೆ ನಡೆಸಿದ ಸಾರಿಗೆ ಇಲಾಖೆಯ ಅಧಿಕಾರಿಗಳು, 120 ವಾಹನಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಜ್ಞಾನಭಾರತಿ ಆರ್‌ಟಿಒ ನೇತೃತ್ವದ ತಂಡ, ಮೈಸೂರು ರಸ್ತೆಯಲ್ಲಿ ವಾಹನಗಳನ್ನು ತಡೆದು ತಪಾಸಣೆ ನಡೆಸಿತು. ಸಾರ್ವಜನಿಕರು, ಶಾಲಾ ಮಕ್ಕಳು, ಗಾರ್ಮೆಂಟ್ ಕಾರ್ಖಾನೆ ಉದ್ಯೋಗಿಗಳನ್ನು ಸರಕು ಸಾಗಣೆ ವಾಹನಗಳಲ್ಲಿ 
ಕರೆದೊಯ್ಯುತ್ತಿರುವುದು ಕಂಡುಬಂತು.

ಅಂಥ ವಾಹನಗಳ ಚಾಲಕರನ್ನು ವಿಚಾರಣೆಗೆ ಒಳಪಡಿಸಿದ ಆರ್‌ಟಿಒ, ಎಚ್ಚರಿಕೆ ನೀಡಿದರು. 120 ವಾಹನಗಳ ವಿರುದ್ದ ಪ್ರಕರಣ ದಾಖಲಿಸಿಕೊಂಡು, 10 ವಾಹನಗಳನ್ನು ಜಪ್ತಿ ಮಾಡಿದರು. 

‘ಸರಕು ಸಾಗಣೆ ವಾಹನಗಳಲ್ಲಿ ಪ್ರಯಾಣಿಸುವುದು ಅಪಾಯಕಾರಿ. ಅಂಥ ವರ್ತನೆಯಿಂದ ಹಲವೆಡೆ ದುರಂತಗಳು ಸಂಭವಿಸಿವೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಬೇಕು’ ಎಂದು ಅಧಿಕಾರಿ ಹೇಳಿದರು.

‘ಸಾರಿಗೆ ನಿಯಮ ಉಲ್ಲಂಘಿಸುವ ವಾಹನಗಳ ಪತ್ತೆಗಾಗಿ ನಿರಂತರವಾಗಿ ಕಾರ್ಯಾಚರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)