ಭಾನುವಾರ, ಜುಲೈ 25, 2021
21 °C

ಸಿಬಿಎಸ್‍ಇ ಪಠ್ಯಕ್ರಮ ಕಡಿತ: ಶಿಕ್ಷಣ ಉಳಿಸಿ ಸಮಿತಿ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 9ರಿಂದ 12ನೇ ತರಗತಿಗಳ ಪಠ್ಯಕ್ರಮದಿಂದ ಧರ್ಮ ನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ ಮುಂತಾದ ಪ್ರಮುಖ ಅಧ್ಯಾಯಗಳನ್ನು ತೆಗೆದು ಹಾಕಿರುವ ಸಿಬಿಎಸ್‍ಇ ಮಂಡಳಿಯ ನಿರ್ಧಾರವನ್ನು ಅಖಿಲ ಭಾರತ ಶಿಕ್ಷಣ ಉಳಿಸಿ ಸಮಿತಿ (ಎಐಎಸ್‍ಇಸಿ) ಖಂಡಿಸಿದೆ.

’ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ನಿರ್ದೇಶನದ ಮೇರೆಗೆ ಮಂಡಳಿ ಈ ನಿರ್ಧಾರ ಕೈಗೊಂಡಿದೆ. ಇದು ಶಿಕ್ಷಣದ ಮೇಲೆ ನಿರಂಕುಶ ಹಾಗೂ ಅಪ್ರಜಾತಾಂತ್ರಿಕ ದಾಳಿ. ಪಠ್ಯಕ್ರಮ ಕಡಿಮೆ ಮಾಡುವ ನೆಪದಲ್ಲಿ ಧರ್ಮ ನಿರಪೇಕ್ಷತೆ, ಒಕ್ಕೂಟ ವ್ಯವಸ್ಥೆ, ಪೌರತ್ವ, ರಾಷ್ಟ್ರೀಯವಾದದಂತಹ ಪ್ರಮುಖ ವಿಷಯಗಳನ್ನು ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ ಪಠ್ಯಕ್ರಮದಿಂದ ತೆಗೆದು ಹಾಕಿರುವುದು ಖಂಡನಾರ್ಹ. ಇದು ಬಿಜೆಪಿ, ಆರ್‌ಎಸ್‌ಎಸ್‌ ಪ್ರತಿಪಾದಿಸುವ ರಾಷ್ಟ್ರತ್ವದ ಪರಿಕಲ್ಪನೆಗೆ ಪೂರಕವಾದ ನಿಲುವನ್ನು ವ್ಯಕ್ತಪಡಿಸುವಂತಿದೆ‘ ಎಂದು ದೂರಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು