ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ 300 ಕಿಲೋ ಇ-ತ್ಯಾಜ್ಯ ಸಂಗ್ರಹಿಸಿದ ಆರ್ಕಿಡ್ಸ್‌ ಶಾಲೆ ಪುಟಾಣಿಗಳು

Last Updated 28 ಡಿಸೆಂಬರ್ 2022, 13:28 IST
ಅಕ್ಷರ ಗಾತ್ರ

ಬೆಂಗಳೂರು: ವಿದ್ಯಾರ್ಥಿಗಳಲ್ಲಿ ಮರುಬಳಕೆ ಹಾಗೂ ಮಿತಬಳಕೆಯ ಅರಿವನ್ನು ಮೂಡಿಸಲು ಆರ್ಕಿಡ್ಸ್‌ ಅಂತರರಾಷ್ಟ್ರೀಯ ಶಾಲೆಇತ್ತೀಚೆಗೆ ನಡೆಸಿದ ಇ-ತ್ಯಾಜ್ಯ ಸಂಗ್ರಹ ಅಭಿಯಾನದಲ್ಲಿ, ಬೆಂಗಳೂರು ನಗರದಲ್ಲಿ ಶಾಲೆಯ ಮಕ್ಕಳು ಸುತ್ತಾಡಿ ಸುಮಾರು 300 ಕೆ.ಜಿ.ಯಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ಸಂಗ್ರಹಿಸಿದರು.

ಅಭಿಯಾನದಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಇ-ತ್ಯಾಜ್ಯ ವಸ್ತುಗಳಾದ ಹಳೆಯ ಲ್ಯಾಪ್ ಟಾಪ್, ಕಂಪ್ಯೂಟರ್, ಟ್ಯಾಬ್‌ಗಳು, ಮೌಸ್, ಸ್ಪೀಕರ್‌ಗಳು, ಬ್ಯಾಟರಿಗಳು, ಪವರ್ ಬ್ಯಾಂಕ್‌ಗಳು, ಚಾರ್ಜರ್‌ಗಳು, ಟಾರ್ಚ್, ಟಿವಿ, ಹೆಡ್ ಫೋನ್‌ಗಳು, ಸಿಡಿ‌, ಡಿವಿಟಿ ಸೆಟ್‌, ವಿಸಿಆರ್‌ಗಳುಳು, ಗ್ಯಾಜೆಟ್‌ಗಳು ಹಾಗೂ ಹಳೆಯ ಮೊಬೈಲ್ ಫೋನ್ ಗಳನ್ನು ಮರುಬಳಕೆ ಸಂಸ್ಥೆಯಾದ'ಇ- ಪರಿಸರಕ್ಕೆ'ಹಸ್ತಾಂತರಿಸಿದರು.

ಇ-ತ್ಯಾಜ್ಯ ಸಂಗ್ರಹ ಅಭಿಯಾನವು ಮುಂಬೈ, ಪುಣೆ, ಹೈದಾರಾಬಾದ್‌ ಹಾಗೂ ಬೆಂಗಳೂರು ನಗರಗಳಲ್ಲಿರುವ ಆರ್ಕಿಡ್ಸ್‌ ಶಾಲೆಗಳಲ್ಲಿ ಸುಮಾರು ಒಂದು ವಾರ ಕಾಲ ನಡೆಯಿತು. ಒಟ್ಟು ಸುಮಾರು 500 ಕೆ.ಜಿ.ಯಷ್ಟು ಎಲೆಕ್ಟ್ರಾನಿಕ್ ತ್ಯಾಜ್ಯ ಸಂಗ್ರಹಿಸಲಾಗಿದ್ದರೆ, ಬೆಂಗಳೂರಿನಲ್ಲೇ ಅಂದಾಜು 300 ಕೆಜಿಯಷ್ಟು ಇ-ತ್ಯಾಜ್ಯ ದೊರೆತಿತ್ತು. ಅಗತ್ಯವಿರುವಷ್ಟೇ ಗ್ಯಾಜೆಟ್‌ ಗಳನ್ನು ಬಳಸಿ, ಅನಗತ್ಯ ಖರೀದಿಯನ್ನು ಮಾಡುವುದಿಲ್ಲವೆಂದು ವಿದ್ಯಾರ್ಥಿಗಳು ಪ್ರತಿಜ್ಞೆ ಕೈಗೊಂಡರು. ಗ್ಯಾಜೆಟ್‌ ಗಳು ರಿಪೇರಿಯಾಗದ ಸ್ಥಿತಿ ತಲುಪಿದಾಗ ಮರುಬಳಕೆ ಕೇಂದ್ರಕ್ಕೆ ನೀಡಲು ನಾಗರೀಕರನ್ನು ಪ್ರೇರೇಪಿಸುವಂತೆ ವಿದ್ಯಾರ್ಥಿಗಳಿಗೆ ತಿಳಿಸಲಾಯಿತು. ಇ-ತ್ಯಾಜ್ಯ ಉತ್ಪನ್ನಗಳ ವಿಂಗಡಣೆ ಹಾಗೂ ಮರುಬಳಕೆಯ ಮಹತ್ವದ ಬಗ್ಗೆ ಇ- ಪರಿಸರದ ಪ್ರತಿನಿಧಿ ಪೂರ್ಣಿಮಾ ಅವರು ಜಾಲಹಳ್ಳಿ ಶಾಖೆಯ ಮಕ್ಕಳಿಗೆ ಅರಿವಿನ ಉಪನ್ಯಾಸ ನೀಡಿದರು.

ಇ-ತ್ಯಾಜ್ಯ ಉತ್ಪಾದನೆಯಲ್ಲಿ ಬೆಂಗಳೂರು ನಗರ ದೇಶದಲ್ಲೇ ಮೂರನೇ ಸ್ಥಾನದಲ್ಲಿದ್ದರೆ, ಭಾರತವು ವಿಶ್ವದಲ್ಲಿ ೫ನೇ ಸ್ಥಾನದಲ್ಲಿದೆ. ವರದಿಯ ಪ್ರಕಾರ ಭಾರತದಲ್ಲಿ ವರ್ಷದಲ್ಲಿ 1.7ಲಕ್ಷ ಮೆಟ್ರಿಕ್‌ ಟನ್‌ನಷ್ಟು ಇ-ತ್ಯಾಜ್ಯ ಉತ್ಪಾದನೆಯಾಗುತ್ತದೆ ಎಂದು ಹೇಳಿದರು.

ಇ-ತ್ಯಾಜ್ಯದಿಂದ ಪರಿಸರದ ಮೇಲೆ ಉಂಟಾಗುವ ಹಾನಿಯ ಬಗ್ಗೆ ಜಾಗೃತಿ ಮೂಡಿಸುವ ಹಿನ್ನೆಲೆಯಲ್ಲಿ ಈ ಅಭಿಯಾನವನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಎಳವೆಯಲ್ಲೇ ಈ ಬಗ್ಗೆ ತಿಳಿಸಿದರೆ, ಮುಂದಕ್ಕೆ ಅವರು ಜವಾಬ್ದಾರಿಯುತ ಪ್ರಜೆಗಳಾಗಿ ಪರಿಸರವನ್ನು ಉಳಿಸುವಲ್ಲಿ ಕಾರ್ಯೋನ್ಮುಖರಾಗುತ್ತಾರೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT