ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಡಲ್ ಅಧಿಕಾರಿ ನೇಮಕಕ್ಕೆ ಆದೇಶ

ಕಂದಾಯ ದಾಖಲೆ ಅಯೋಮಯ: ಅರ್ಜಿದಾರನಿಗೆ ₹ 1 ಲಕ್ಷ ದಂಡ
Last Updated 23 ಜುಲೈ 2022, 21:24 IST
ಅಕ್ಷರ ಗಾತ್ರ

ಬೆಂಗಳೂರು: ‘ಬೋಗಸ್ ದಾಖಲೆ ಸೃಷ್ಟಿಸುವ ಮೂಲಕ ಕ್ರಯಪತ್ರದ ಸ್ವತ್ತಿನ ವಿವರದಲ್ಲಿ ನಕಲಿ ಖಾತೆ ಸಂಖ್ಯೆಗಳನ್ನು ಕಾಣಿಸಿ ಮೋಸದಿಂದ ಬೆಲೆ ಬಾಳುವ ಇಪ್ಪತ್ತು ಗುಂಟೆ ಸರ್ಕಾರಿ ಜಮೀನಿನ ಮೇಲೆ ಹಕ್ಕು ಸಾಧಿಸಲು ವ್ಯಾಜ್ಯ ನಡೆಸಿದ್ದೀರಿ’ ಎಂದು ತೀರ್ಮಾನಿಸಿದ ಹೈಕೋರ್ಟ್, ಅರ್ಜಿದಾರೊಬ್ಬರಿಗೆ
₹ 1 ಲಕ್ಷ ದಂಡ ವಿಧಿಸಿದೆ.

ಪ್ರಕರಣವೊಂದರಲ್ಲಿ, ಕಟ್ಟಡ ತೆರವುಗೊಳಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನೀಡಿದ್ದ ನೋಟಿಸ್ ಪ್ರಶ್ನಿಸಿ ಯಳ್ಳಿಕುಂಟೆ ಗ್ರಾಮದ ಮೆಸರ್ಸ್ ಇನ್ಫ್ರಾ ಎಸ್ಟೇಟ್ಸ್ ಪಾಲುದಾರಿಕಾ ಸಂಸ್ಥೆ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ಏಕಸದಸ್ಯ ನ್ಯಾಯಪೀಠ ವಜಾಗೊಳಿಸಿದೆ.

ಸಂಸ್ಥೆಯ ಪಾಲುದಾರರೂ ಆದ ಅರ್ಜಿದಾರ ವಿ.ಸಿ.ಭಾಗ್ಯರಾಜು, ‘ದಂಡದ ಮೊತ್ತವನ್ನು ಈ ತೀರ್ಪು ಹೊರಬಿದ್ದ ದಿನದಿಂದ ಎರಡು ವಾರಗಳ ಒಳಗಾಗಿ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ಪಾವತಿ ಮಾಡಬೇಕು’ ಎಂದು ಆದೇಶಿಸಿದೆ.

‘ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಸ್ವತ್ತಿನ ವಿವರಗಳಿಗೆ ತಡಕಾಡುವಾಗ ಕಂದಾಯ ಇಲಾಖೆಯ ಮುಂದೆ ಅನೇಕ ಸವಾಲುಗಳಿವೆ‘ ಎಂದು ಆತಂಕ ವ್ಯಕ್ತ
ಪಡಿಸಿರುವ ನ್ಯಾಯಪೀಠ, ಇದೇ ವೇಳೆ ರಾಜ್ಯ ಸರ್ಕಾರವು ಕಂದಾಯ ಇಲಾಖೆಯ ವ್ಯವಸ್ಥೆ ಸುಧಾರಣೆಗೆ ಮುಂದಾಬೇಕು ಎಂದು ಕೆಲವು ಮಹತ್ವದ ನಿರ್ದೇಶನಗಳನ್ನೂ ನೀಡಿದೆ.

‘ಕಂದಾಯ ದಾಖಲೆಗಳಲ್ಲಿ ಸಮಸ್ಯೆಗಳ ಪರಿಹಾರಕ್ಕಾಗಿ; ಕಂದಾಯ, ನಗರಾಭಿವೃದ್ಧಿ ಇಲಾಖೆ ಹಾಗೂ ಪ್ರಾಧಿಕಾರಗಳು, ನಗರ ಯೋಜನಾ ಪ್ರಾಧಿಕಾರಗಳು, ನಗರಸಭೆ ಮತ್ತು ಪಾಲಿಕೆಯ ಆಡಳಿತಾಂಗಗಳು ಇ-ಆಡಳಿತದ ಜೊತೆ ಸಮನ್ವಯ ಸಾಧಿಸ
ಬೇಕು. ಈ ದಿಸೆಯಲ್ಲಿ ಐಎಎಸ್ ದರ್ಜೆಯ ನೋಡಲ್ ಅಧಿಕಾರಿಯೊಬ್ಬರನ್ನು ನೇಮಕ ಮಾಡಬೇಕು’ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

‘ನಮೂದಿತ ಕಂದಾಯ ದಾಖಲೆಗಳ ಉಲ್ಲೇಖ ಅಥವಾ ಪ್ರತಿ ವ್ಯಾಖ್ಯಾನ ಗಳಲ್ಲಿರುವ ಸರ್ವೇ ನಂಬರ್, ಸರ್ವೇ ನಂಬರ್‌ಗಳಿಗೆ ನೀಡಿರುವ ಉಪಸಂಖ್ಯೆ, ಖಾನೇಷುಮಾರಿ (ಊರೂರುಗಳಲ್ಲಿ ಜನ, ಮನೆ, ದನ‌ಕರುಗಳನ್ನು ಕ್ರಮವಾಗಿ ಎಣಿಕೆ ಮಾಡುವುದು ಮತ್ತು ಗಣತಿ ಮಾಡಿ ಲೆಕ್ಕಕ್ಕೆ ತೆಗೆದುಕೊಳ್ಳುವುದು)
ಸಂಖ್ಯೆ, ನಿವಾಸಗಳ ಪಟ್ಟಿ ಮಾಡಿದ ಸಂಖ್ಯೆ, ಅನುಕ್ರಮ ಸಂಖ್ಯೆ ಅಥವಾ ಗ್ರಾಮ‌
ಪಂಚಾಯಿತಿಗಳಲ್ಲಿ ನೀಡಲಾಗಿರುವ ಖಾತೆ ಸಂಖ್ಯೆ, ಖಾತಾ ಸಂಖ್ಯೆ, ಇ-ಖಾತಾ ಸಂಖ್ಯೆ, ನಗರಸಭೆ ವತಿಯಿಂದ ನೀಡಿದ ಸಂಖ್ಯೆ, ನಗರ ಯೋಜನಾ ಖಾತಾ ಸಂಖ್ಯೆ, ನಗರಸಭೆ ಖಾತಾ ಸಂಖ್ಯೆ, ಸಿಟಿಎಸ್ ನಂಬರ್, ಚಾಲ್ತಿ ನಂಬರ್, ಬಿಡಿಎ ಅಥವಾ ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ ನಿವೇಶನ ಸಂಖ್ಯೆ, ಕೆಐಎಡಿಬಿ ಪ್ಲಾಟ್ ನಂಬರ್ ಗಳನ್ನು ಕೂಡಲೇ ನವೀಕರಣ ಪ್ರಕ್ರಿಯೆಗೆ ಒಳಪಡಿಸಬೇಕು’ ಎಂದು ನಿರ್ದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT