ಅಂಗಾಂಗ ದಾನಕ್ಕೆ ‘ವಾಕಥಾನ್‌’

7

ಅಂಗಾಂಗ ದಾನಕ್ಕೆ ‘ವಾಕಥಾನ್‌’

Published:
Updated:

ಬೆಂಗಳೂರು: ‘ಅಂಗಾಂಗ ದಾನ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದ ಸ್ವಾತಂತ್ರ್ಯ ದಿನವಾದ ಇದೇ 15ರಂದು ಯಲಹಂಕ ನ್ಯೂಟೌನ್‌ನಲ್ಲಿ ‘ವಾಕಥಾನ್‌’ ಹಮ್ಮಿಕೊಳ್ಳಲಾಗಿದೆ’ ಎಂದು ಲಯನ್ಸ್‌ ಕ್ಲಬ್‌ (ಸುರಕ್ಷಾ) ಅಧ್ಯಕ್ಷೆ ಎ.ವಿ. ದೇಚಮ್ಮ ತಿಳಿಸಿದರು.

‘ಬಿಷಪ್‌ ಕಾಟನ್‌ ಅಕಾಡೆಮಿ ಆಫ್‌ ಪರ್ಸನಲ್‌ ಮ್ಯಾನೇಜ್‌ಮೆಂಟ್‌ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಸುಮಾರು ಒಂದೂವರೆ ಕಿ.ಮೀ ದೂರದವರೆಗೆ ವಾಕಥಾನ್‌ ನಡೆಯಲಿದೆ. ಲಯನ್ಸ್‌ ಸಂಸ್ಥೆಯ ಪ್ರಮುಖರಾದ ಬಿ.ಎಸ್‌. ರವೀಂದ್ರ, ಬಿ.ಎಸ್‌. ರಾಜಶೇಖರಯ್ಯ, ಲೀಲಾವತಿ ಶೆಟ್ಟಿ ಸೇರಿ ಹಲವರು ಭಾಗವಹಿಸಲಿದ್ದಾರೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !