ಭಾನುವಾರ, ಜೂನ್ 13, 2021
26 °C

ಮಲ್ಟಿಪ್ಲೆಕ್ಸ್‌ ಸಮೂಹದಿಂದ ಆಮ್ಲಜನಕ ಸಾಂದ್ರಕ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಮಲ್ಟಿಪ್ಲೆಕ್ಸ್‌ ಸಮೂಹ ಸಂಸ್ಥೆಯು ಬೆಂಗಳೂರು ಕೇಂದ್ರ ಕಾರಾಗೃಹದ ಆರೋಗ್ಯ ಕೇಂದ್ರ ಹಾಗೂ ತುಮಕೂರು ಜಿಲ್ಲಾಡಳಿತಕ್ಕೆ ತಲಾ 5 ಆಮ್ಲಜನಕ ಸಾಂದ್ರಕಗಳನ್ನು ಕೊಡುಗೆಯಾಗಿ ನೀಡಿದೆ.

ಕಾರಾಗೃಹ ಇಲಾಖೆಯ ಮಹಾನಿರ್ದೇಶಕ ಅಲೋಕ್‌ ಮೋಹನ್‌ ಅವರ ಸೂಚನೆಯಂತೆ ಆರೋಗ್ಯ ಕೇಂದ್ರಕ್ಕೆ ಆಮ್ಲಜನಕ ಸಾಂದ್ರಕಗಳನ್ನು ಒದಗಿಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.

‘ಕೋವಿಡ್‌ನಿಂದ ಸೃಷ್ಟಿಯಾಗಿರುವ ಈ ಬಿಕ್ಕಟ್ಟಿನ ಸಮಯದಲ್ಲಿ ಜನರ ಜೀವ ರಕ್ಷಿಸಲು ಆಮ್ಲಜನಕ ಸಾಂದ್ರಕಗಳು ಸಹಕಾರಿ. ಮಲ್ಟಿಪ್ಲೆಕ್ಸ್‌ ಸಂಸ್ಥೆ ಇವುಗಳನ್ನು ಒದಗಿಸಿರುವುದು ಸಂತಸದ ವಿಷಯ. ಈ ಸಂಸ್ಥೆಯ ಕಾರ್ಯ ಇತರರಿಗೂ ಮಾದರಿಯಾಗಲಿ’ ಎಂದು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ರಂಗನಾಥ್‌ ಹೇಳಿದರು.

ಕಾರಾಗೃಹ ಆರೋಗ್ಯ ಕೇಂದ್ರದ ಮುಖ್ಯ ಆರೋಗ್ಯಾಧಿಕಾರಿ ಡಾ.ಉಮಾ, ಅಧೀಕ್ಷಕರಾದ ಲತಾ, ವೈದ್ಯಾಧಿಕಾರಿ ಡಾ.ಸಂತೋಷ್‌, ಡಾ.ಪ್ರಮೀಳಾ, ಸಹಾಯಕ ಅಧೀಕ್ಷಕ ಪರಮೇಶ್‌, ಮಹದೇವನಾಯಕ್‌ ಹಾಗೂ ಶ್ರೀಶೈಲ ಮೇಟಿ ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು