ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೈ ಇಂಟರ್‌ನ್ಯಾಷನಲ್‌: ಲಕ್ಕಿ ಡ್ರಾ ಫಲಿತಾಂಶ ಪ್ರಕಟ

Last Updated 6 ಡಿಸೆಂಬರ್ 2022, 21:43 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೆಂಗಳೂರು: ಪೈ ಇಂಟರ್‌ನ್ಯಾಷನಲ್‌ ಎಲೆಕ್ಟ್ರಾನಿಕ್ಸ್‌ ಸಂಸ್ಥೆಯು ನಡೆಸಿದ ಲಕ್ಕಿ ಡ್ರಾ ಫಲಿತಾಂಶ ಪ್ರಕಟವಾಗಿದೆ.

ಗ್ರಾಹಕರು ಹತ್ತಿರದ ಪೈ ಮಳಿಗೆ ಅಥವಾ ವೆಬ್‌ಸೈಟ್‌: www.paiinternational.inನಲ್ಲಿ ವಿಜೇತರ ವಿವರ ವೀಕ್ಷಿಸಬಹುದು ಎಂದು ಸಂಸ್ಥೆ ತಿಳಿಸಿದೆ.

ಇದೇ ವರ್ಷದ ಸೆ.24ರಿಂದ ನ.29ರ ಒಳಗೆ ಪೈ ಮಳಿಗೆಯಲ್ಲಿ ಖರೀದಿಸಿದ ಗ್ರಾಹಕರ ಸಮ್ಮುಖ
ದಲ್ಲಿ ಡಿ.24ರಂದು ನಡೆದ ಕಾರ್ಯಕ್ರಮದಲ್ಲಿ ವಿಜೇತರ ಆಯ್ಕೆ ಮಾಡಲಾಯಿತು. ಸಾಮಾಜಿಕ ಮಾಧ್ಯಮದಲ್ಲೂ ನೇರಪ್ರಸಾರ ಮಾಡಲಾಯಿತು ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಮೂವರು ಗ್ರಾಹಕರಿಗೆ ₹ 10 ಲಕ್ಷ ನಗದು ಬಹುಮಾನ (ಮೆಗಾ ಬಂಪರ್ ಬಹುಮಾನ), 120 ಗ್ರಾಹಕರಿಗೆ₹ 1 ಲಕ್ಷದ ನಗದು ಬಹುಮಾನ, 300 ಗ್ರಾಹಕರಿಗೆ 20 ಸಾವಿರ ಪೈ ಲಾಯಲ್ಟಿ ಪಾಯಿಂಟ್ಸ್‌ (ಪ್ರಥಮ), 300 ಗ್ರಾಹಕರಿಗೆ 10 ಸಾವಿರ ಪೈ ಲಾಯಲ್ಟಿ ಪಾಯಿಂಟ್ಸ್‌ (ದ್ವಿತೀಯ), 3 ಸಾವಿರ ಗ್ರಾಹಕರಿಗೆ 5 ಸಾವಿರಲಾಯಲ್ಟಿ ಪಾಯಿಂಟ್ಸ್‌ (ತೃತೀಯ), 60 ಸಾವಿರ ಗ್ರಾಹಕರಿಗೆ 2 ಸಾವಿರ
ಲಾಯಲ್ಟಿ ಪಾಯಿಂಟ್ಸ್‌ (ನಾಲ್ಕನೇ ಬಹುಮಾನ) ಘೋಷಿಸಲಾ
ಗಿದೆ. 63,723 ಮಂದಿಗೆ ಬಹುಮಾನ ಘೋಷಿಸಲಾಗಿದೆ. 21,59,836 ಕೂಪನ್ ವಿತರಿಸಲಾಗಿತ್ತು.

’ಕರ್ನಾಟಕ ಹಾಗೂ ತೆಲಂಗಾಣ
ದಲ್ಲಿ ಪೈ ಷೋರೂಂಗಳಿವೆ. ನಂಬಿಕೆಗೆ ಅರ್ಹವಾದ ಸಂಸ್ಥೆಯಾಗಿದ್ದು, ಎಲೆಕ್ಟ್ರಾನಿಕ್ಸ್, ಮೊಬೈಲ್‌, ಲ್ಯಾಪ್‌ಟಾಪ್‌ಗಳು ಲಭಿಸುತ್ತಿವೆ. ಪಾರದರ್ಶಕವಾಗಿ ವಿಜೇತರ ಆಯ್ಕೆ ನಡೆದಿದೆ’ ಎಂದು ವ್ಯವಸ್ಥಾಪಕ ನಿರ್ದೇಶಕ ರಾಜಕುಮಾರ ಪೈ ತಿಳಿಸಿದ್ದಾರೆ.

‘ಇದುವರೆಗೆ ಗ್ರಾಹಕರಿಗೆ 320 ಕಾರು, 320 ಬೈಕ್‌, 78.12 ಕೋಟಿ ಪೈ ಲಾಯಲ್ಟಿ ಪಾಯಿಂಟ್ಸ್‌, ₹ 2.65 ಕೋಟಿ ನಗದು ಬಹುಮಾನ, 7.32 ಕೋಟಿ ಚಿನ್ನದ ನಾಣ್ಯ ವಿತರಣೆ ಮಾಡಲಾಗಿತ್ತು. ಜತೆಗೆ, ಎಲ್‌ಸಿಡಿ, ಎಲ್‌ಇಡಿ, ರೆಫ್ರಿಜರೇಟರ್‌, ವಾಷಿಂಗ್‌ ಮಷಿನ್‌, ಮೊಬೈಲ್‌, ಡಿ.ವಿ.ಡಿ ಪ್ಲೇಯರ್‌
ಹಾಗೂ ಇಂಡಕ್ಷನ್‌ ಕುಕ್ಕರ್‌ಗಳನ್ನು ಗ್ರಾಹಕರಿಗೆ ವಿತರಿಸಲಾಗಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT