ಶನಿವಾರ, ಮಾರ್ಚ್ 6, 2021
28 °C

ಪಂಚಮಸಾಲಿ ಹೋರಾಟದಲ್ಲಿ ಒಡಕಿಲ್ಲ: ವಚನಾನಂದ ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೂಡಲಸಂಗಮ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ತಮ್ಮ ಉದ್ದೇಶ ಒಂದೇ ಆಗಿದೆ. ತಮ್ಮ ಮಧ್ಯೆ ಒಡಕಿನ ಪ್ರಶ್ನೆಯೇ ಇಲ್ಲ ಎಂದು ಹರಿಹರದ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, ‘ಎರಡು ದಿನಗಳಿಂದ ನಡೆದ ಹಲವಾರು ಘಟನೆಗಳು, ಹೇಳಿಕೆಗಳು ಹಾಗೂ ಪ್ರತಿಕ್ರಿಯೆಗಳು ನಮ್ಮ ಭಕ್ತರ ಮಧ್ಯೆ ಹಲವಾರು ಗೊಂದಲಗಳನ್ನು ಹುಟ್ಟು ಹಾಕಿದಂತೆ ಕಾಣಿಸುತ್ತಿದೆ. ಅಲ್ಲದೆ, ಹಲವಾರು ಪ್ರಶ್ನೆಗಳು ಉದ್ಭವಿಸುವಂತೆ ಮಾಡಿವೆ. ಹೋರಾಟದ ಎಲ್ಲೊ ಬಿರುಕು
ಗೊಂಡಿದೆಯಾ ಎನ್ನುವ ಮಾತು
ಗಳನ್ನು ತೇಲಿಬಿಡಲಾಗುತ್ತಿದೆ. ಯಾವಾಗ ರಾಜಕಾರಣ ಹೋರಾಟ
ದಲ್ಲಿ ತನ್ನ ಹಸ್ತಕ್ಷೇಪ ಮಾಡು
ತ್ತದೋ, ಆಗ ಈ ರೀತಿಯ ಗೊಂದಲ
ಗಳ ಸೃಷ್ಟಿ ಸಾಮಾನ್ಯ. ಏಕೆಂದರೆ, ಅವುಗಳ ಉದ್ದೇಶವೇ ಅದಾಗಿರುತ್ತದೆ’ ಎಂದರು.

‘ಜಯಮೃತ್ಯುಂಜಯ ಸ್ವಾಮೀಜಿಗಳು ಏಕಾಂಗಿಯಾಗಿ ಪ್ರಾರಂಭಿಸಿದ ಹೋರಾಟ ಹಲವಾರು ದಿಕ್ಕುಗಳ ಮೂಲಕ ಹರಿದು ಬರುತ್ತಿತ್ತು. ಹರಪನಹಳ್ಳಿಯಲ್ಲಿ ನಾವು ಈ ಹೋರಾಟಕ್ಕೆ ಕೈಜೋಡಿಸಿದಾಗ, ಹೋರಾಟ ಬೃಹತ್‌ ಪ್ರಮಾಣದ ಶಕ್ತಿಯನ್ನು ಪಡೆದುಕೊಂಡಿತು. ನಂತರ ಇಬ್ಬರೂ ಜತೆಯಲ್ಲೇ ಹೆಜ್ಜೆ ಹಾಕಿದ್ದೇವೆ. ಬೆಂಗಳೂರಿನಲ್ಲಿ ಸಮಾವೇಶ ನಡೆಸಿದ ನಂತರ ಧರಣಿ ಸತ್ಯಾಗ್ರಹದಂತಹ ನಿರ್ಧಾರ ತಗೆದುಕೊಂಡಲ್ಲಿ ನಾವು ಅದರಲ್ಲಿ ಪಾಲ್ಗೊಳ್ಳುವುದಿಲ್ಲ ಎನ್ನುವುದನ್ನೂ ಮೊದಲೇ ತಿಳಿಸಿದ್ದು, ಅಂದ ಮಾತ್ರಕ್ಕೆ ಸಮಾಜಕ್ಕೆ ಮೀಸಲಾತಿ ಕೊಡಿಸುವ ಹೋರಾಟದಿಂದ ಹಿಂದೆ ಸರಿದಿಲ್ಲ’ ಎಂದವರು ತಿಳಿಸಿದ್ದಾರೆ.

‘ಜಯಮೃತ್ಯುಂಜಯ ಸ್ವಾಮೀಜಿಗಳ ಜತೆ ದೈಹಿಕವಾಗಿ ಪಕ್ಕದಲ್ಲಿ ಕುಳಿತಿಲ್ಲ. ಮಾನಸಿಕವಾಗಿ ಯಾವಾಗಲೂ ಅವರ ಜತೆಯಲ್ಲೇ ಇದ್ದೇವೆ’ ಎಂದರು

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು