ಭಾನುವಾರ, ಆಗಸ್ಟ್ 1, 2021
23 °C

ಪಂಚಮಸಾಲಿ ಸಮಾಜ ಮೂರನೇ ಪೀಠಕ್ಕೆ ಸಿದ್ಧತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಜಮಖಂಡಿ: ಪಂಚಮಸಾಲಿ ಸಮಾಜದ ಹರಿಹರ ಹಾಗೂ ಕೂಡಲಸಂಗಮ ಪೀಠಗಳ ಹೊರತಾಗಿ ಮೂರನೇ ಪೀಠದ ಸ್ಥಾಪನೆಗೆ ಸಮಾಜದ 30ಕ್ಕೂ ಹೆಚ್ಚು ಸ್ವಾಮೀಜಿಗಳು ನಗರದಲ್ಲಿ ಮಂಗಳವಾರ ಸಭೆ ನಡೆಸಿದರು.

ಸಮಾಜದ ಒಳಿತಿಗಾಗಿ ರಾಜಕೀಯ ಹೊರತಾಗಿ ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರ್ಯತತ್ಪರವಾಗುವ ನಿಟ್ಟಿನಲ್ಲಿ ಪಂಚಮಸಾಲಿ ಸಮಾಜಕ್ಕೆ ಮೂರನೇ ಪೀಠದ ಅವಶ್ಯಕತೆ ಇದೆ. ಸಮಾಜದ ಮಠಾಧೀಶರು ಸೇರಿ ಸಾಮೂಹಿಕ ಪ್ರಯತ್ನದ ಮೂಲಕ ಮೂರನೇ ಪೀಠ ಆರಂಭಿಸಲು ಸಭೆ ನಿರ್ಧರಿಸಿತು ಎಂದು ಹೇಳಲಾಗಿದೆ.

ಜಮಖಂಡಿಯ ಭಕ್ತರ ಮನೆ
ಯೊಂದರಲ್ಲಿ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಸಮಾಜದ ಸ್ವಾಮೀಜಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಹಿಂದೆ ಅಥಣಿ ತಾಲ್ಲೂಕಿನ ಕಕಮರಿ ಮಠದಲ್ಲಿ ಸಭೆ ಮಾಡಿ ಚರ್ಚೆ ಮಾಡಲಾಗಿತ್ತು. ಈಗ ನಿರ್ಧಾರ ತೆಗೆದುಕೊಳ್ಳಲಾಗಿದೆ. ಯಾವುದೇ ಭೇದ– ಭಾವವನ್ನು ಇಲ್ಲಿ ಮಾಡುವುದಿಲ್ಲ. ಎಲ್ಲರಿಗೂ ಸಮಾನ ಆದ್ಯತೆ ನೀಡಲಾಗುತ್ತಿದೆ ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಸ್ವಾಮೀಜಿಯೊಬ್ಬರು ತಿಳಿಸಿದರು.

ಈಗಿರುವ ಎರಡು ಪೀಠಗಳಿಂದ ಸಮಾಜದ ಅಭಿವೃದ್ಧಿ ಆಗುತ್ತಿಲ್ಲ. ರಾಜ
ಕೀಯವೇ ಅಲ್ಲಿ ಪ್ರಾಮುಖ್ಯತೆ ಪಡೆದಿದೆ. ಸ್ವಾಮೀಜಿಗಳು ರಾಜಕೀಯದಿಂದ ದೂರವಿದ್ದು ಸಮಾಜ ಮುನ್ನಡೆಸಬೇಕು. ಆದರೆ ಅಲ್ಲಿ ಸ್ವಾರ್ಥವೇ ತುಂಬಿದೆ. ಸಮಾಜದ ಒಳಿತಿಗಾಗಿ ಶ್ರಮಿಸಬೇಕು. ನಮ್ಮ ಸಮಾಜದ ಕೆಲ ರಾಜಕೀಯ ಮುಖಂಡರನ್ನು ಮಾತ್ರ ಕೆಲವು ಪೀಠಗಳು ಮೇಲೆತ್ತುತ್ತಿವೆ. ಆದ್ದರಿಂದ ಎಲ್ಲರನ್ನು ಸೇರಿಸಿಕೊಂಡು ಮುನ್ನಡೆ
ಯಸಲು ಈ ನಿರ್ಧಾರ ತೆಗೆದು
ಕೊಳ್ಳಲಾಗಿದೆ ಎಂದು ತಿಳಿಸಿದರು.

ಸಭೆಯಲ್ಲಿ ನೆಲೋಗಿಯ ಶಿವಾನಂದ ಮಠದ ಸಿದ್ಧಲಿಂಗ ಸ್ವಾಮೀಜಿ, ಬಬಲೇಶ್ವರದ ಮಹಾದೇವ ಸ್ವಾಮೀಜಿ, ಕಕಮರಿ ರಾಯಲಿಂಗೇಶ್ವರ ಸ್ವಾಮೀಜಿ, ಮನಗೂಳಿ ಸಂಗನಬಸವ ಸ್ವಾಮೀಜಿ, ಖಾಜಿ ಬೀಳಗಿಯ ಚಿನ್ಮಯಾನಂದ ಸ್ವಾಮೀಜಿ, ಕುಂಚನೂರ ಕಮರಿಮಠದ ಸ್ವಾಮೀಜಿ, ಆಲಗೂರ ಧರಿದೇವರ ಸ್ವಾಮೀಜಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು